×
Ad

ಚೀನಾ ಯುದ್ಧಕ್ಕೆ ಸಿದ್ದವಾಗುತ್ತಿದ್ದರೆ, ಕೇಂದ್ರ ಸರಕಾರ ನಿದ್ದೆ ಮಾಡುತ್ತಿದೆ: ರಾಹುಲ್ ಗಾಂಧಿ ಆರೋಪ

Update: 2022-12-17 10:07 IST

ಜೈಪುರ: ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಪ್ರಸ್ತುತ ರಾಜಸ್ಥಾನದಾದ್ಯಂತ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Rahul Gandhi ಚೀನಾ "ಯುದ್ಧಕ್ಕೆ ಸಿದ್ಧವಾಗುತ್ತಿದ್ದರೆ" ಕೇಂದ್ರ ಸರಕಾರವು "ನಿದ್ದೆ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.

" ಪ್ರಸ್ತುತ ಪರಿಸ್ಥಿತಿಯಲ್ಲಿ ಚೀನಾ ಆಕ್ರಮಣಕ್ಕೆ ಮಾತ್ರ ತಯಾರಿ ನಡೆಸುತ್ತಿಲ್ಲ, ಆದರೆ ಅದು ಪೂರ್ಣ ಪ್ರಮಾಣದ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಬೆದರಿಕೆ ಸ್ಪಷ್ಟವಾಗಿದೆ ಆದರೆ ನಮ್ಮ ಸರಕಾರವು ಬೆದರಿಕೆಯನ್ನು ನಿರ್ಲಕ್ಷಿಸುತ್ತಿದೆ. ಕೇಂದ್ರವು ನಮ್ಮಿಂದ ಸತ್ಯಗಳನ್ನು ಮರೆಮಾಡಲು ಪ್ರಯತ್ನಿಸುತ್ತಿದೆ.  ಆದರೆ ಸರಕಾರವು  ಅಂತಹ ವಿಷಯಗಳನ್ನು ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಿಲ್ಲ'' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

"ಚೀನಾದ ಬಗ್ಗೆ ಎಚ್ಚರಿಕೆ ವಹಿಸುವಂತೆ ಈ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೆ. ಚೀನಾದ ಮಾದರಿಯನ್ನು ನೋಡಿ... ಅವರು ಲಡಾಖ್ ಹಾಗೂ  ಅರುಣಾಚಲ ಭಾಗಗಳಲ್ಲಿ ತಯಾರಿ ನಡೆಸುತ್ತಿದ್ದಾರೆ. ಆದರೆ ಭಾರತ ಸರಕಾರ ನಿದ್ರಿಸುತ್ತಿದೆ”ಎಂದು ಕಾಂಗ್ರೆಸ್ ವರಿಷ್ಠರು ಹೇಳಿದ್ದಾರೆ.

Similar News