×
Ad

ಉಡುಪಿ: ಉಚಿತ ಮಧುಮೇಹ ತಪಾಸಣಾ ಶಿಬಿರ

Update: 2022-12-17 15:50 IST

ಉಡುಪಿ, ಡಿ.17: ಲಯನ್ಸ್ ಕ್ಲಬ್ ಉಡುಪಿ, ಶಿವಾನಿ ಡಯಾಗ್ನೋಷ್ಟಿಕ್ ಅ್ಯಂಡ್ ರೀಸರ್ಚ್ ಸೆಂಟರ್ ಮತ್ತು ನವ್ಯ ಚೇತನ ಶಿಕ್ಷಣ ಸಂಶೋಧನೆ ಹಾಗೂ ಕಲ್ಯಾಣ ಟ್ರಸ್ಟ್ ಸಹಭಾಗಿತ್ವದಲ್ಲಿ ಮಧುಮೇಹ ಮಾಹಿತಿ ಮತ್ತು ತಪಾಸಣಾ ಶಿಬಿರ ಇಂದು ಉಡುಪಿಯ ಲಯನ್ಸ್ ಭವನದಲ್ಲಿ ನಡೆಯಿತು.

ಈ ತಪಾಸಣಾ ಶಿಬಿರದಲ್ಲಿ ನೂರಕ್ಕೂ ಅಧಿಕ ಸಾರ್ವಜನಿಕರು ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಮಾಡಿಸಿಕೊಂಡು ಶಿಬಿರದ ಪ್ರಯೋಜನವನ್ನು ಪಡೆದರು.

ನವ್ಯ ಚೇತನ ಶಿಕ್ಷಣ ಸಂಶೋಧನೆ ಹಾಗೂ ಕಲ್ಯಾಣ ಟ್ರಸ್ಟ್ ಅಧ್ಯಕ್ಷರಾದ ಡಾ. ಶಿವಾನಂದ ನಾಯಕ್ ಅವರು ಮಧುಮೇಹ ಕಾಯಿಲೆ ಮತ್ತು ಹತೋಟಿಯಲ್ಲಿ ಇಡುವ ಬಗ್ಗೆ ಮಾಹಿತಿ ನೀಡಿದರು.

ಲಯನ್ಸ್ ಕ್ಲಬ್‌ನ ಮಾಜಿ ಜಿಲ್ಲಾ ರಾಜ್ಯಪಾಲ ಡಾ. ಎ.ರವೀಂದ್ರನಾಥ ಶೆಟ್ಟಿ ಕಟಪಾಡಿ, ಅಧ್ಯಕ್ಷರಾದ ದಿವಾಕರ ಶೆಟ್ಟಿ ಎಂ., ಕಾರ್ಯದರ್ಶಿ ರವಿರಾಜ್ ಯು.ಎಸ್, ಕಜಾಂಚಿ ವಿಜಯ ಕುಮಾರ್, ಸದಸ್ಯರೂ, ಸಮಾಜ ಸೇವಕರಾದ ಇಕ್ಬಲ್ ಮನ್ನಾ, ಶಿವಾನಿ ಡಯಾಗ್ನೋಷ್ಟಿಕ್ ಅ್ಯಂಡ್ ರೀಸರ್ಚ್ ಸೆಂಟರ್‌ನ ಸಿಬ್ಬಂದಿ ವರ್ಗದವರಾದ ಸಫಾ, ಅನನ್ಯ, ಕಾರ್ತಿಕ್, ಶೈನಿ ಶಿಬಿರದಲ್ಲಿ ಉಪಸ್ಥಿತರಿದ್ದರು.

Similar News