×
Ad

ಶಿರಸಿ: ಅರಣ್ಯವಾಸಿಗಳನ್ನು ಉಳಿಸಿ ಕಲಾತಂಡದೊಂದಿಗೆ ಬೃಹತ್ ಜಾಥ

Update: 2022-12-17 17:32 IST

ಶಿರಸಿ: ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ಕಾರ್ಯಕ್ರಮದ ಅಂಗವಾಗಿ ವಿಶಿಷ್ಟ ಜಾನಪದ ನೃತ್ಯ, ಡೊಳ್ಳು, ಇನ್ನಿತರ ಜಾನಪದ ತಂಡದೊಂದಿಗೆ ಇಂದು ಶಿರಸಿ ನಗರದಲ್ಲಿ ಬೃಹತ್ ಮೆರವಣಿಗೆ ಜರುಗಿದವು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಡೊಳ್ಳು ಭಾರಿಸಿ ಕಾರ್ಯಕ್ರಮ ಉದ್ಘಾಟಿಸಿ, ಮಾರಿಕಾಂಬ ದೇವಾಲಯದ ಏದುರು ಮೆರವಣಿಗೆ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳ ಮೂಲಕ   ಸಾಮ್ರಾಟ ಎದುರು, ಪೋಲೀಸ್ ಠಾಣೆ ಕ್ರೀಡಾಂಗಣದವರೆಗೂ ಜಾಥ ಸಂಚರಿಸಿತು.

ಜೇನು ಕುರಬ, ವಾಲ್ಮೀಕಿ, ಲಮಾಣಿ ಮತ್ತು ಗೊಂಡ ನೃತ್ಯ  ಡೊಳ್ಳು, ಗಿಗಿಪದ ಮುಂತಾದ ರಾಜ್ಯಾದ್ಯಂತ ಆಗಮಿಸಿದ ಜಾನಪದ ತಂಡವು ಮೆರೆವಣಿಗೆಯ ವಿಶೇಷವಾಗಿದ್ದವು.

ರಾಜ್ಯಾದ್ಯಂತ ಆಗಮಿಸಿದ ಅರಣ್ಯ ಭೂಮಿ ಹಕ್ಕು ಹೋರಾಟಗಾರರಾದ ರಾಮು ಕೊಡಗು, ಚಿಕ್ಕಣ್ಣ ಚಾಮರಾಜಪೇಟೆ, ಬೋರಯ್ಯ ಚಿತ್ರದುರ್ಗ, ಶಂಕ್ರು ಲಮಾಣಿ ಗದಗ, ಇಸ್ಮಾಯಿಲ್ ದಾವಣಗೇರಿ, ಶ್ರೀನಿವಾಸ ಮೂರ್ತಿ, ರಮಣಯ್ಯ ಚಿಕ್ಕಮಂಗಳೂರು, ಹೇಮರಾಜ ಕೊಪ್ಪಳ ಮುಂತಾದ ರಾಜ್ಯಮಟ್ಟದ ಧುರೀಣರು ಹಾಗೂ ಜಿಲ್ಲೆಯ ಧುರೀಣರಾದ ಮಂಜುನಾಥ ಮರಾಠಿ ಕುಮಟ, ಭಿಮ್ಸಿ ವಾಲ್ಮೀಕಿ ಯಲ್ಲಾಪುರ, ಶಿವಾನಂದ ಜೋಗಿ ಮುಂಡಗೋಡ, ದೇವರಾಜ ಮರಾಠಿ ಬಂಡಲ, ಕೆಟಿ ನಾಯ್ಕ, ಬಿಡಿ ನಾಯ್ಕ, ಜಗದೀಶ್ ನಾಯ್ಕ, ಮೋಹನ ನಾಯ್ಕ, ಲಕ್ಷ್ಮಣ ಮಾಳ್ಳಕ್ಕನವರ ಶಿರಸಿ, ಸುಭಾಷ್ ಗಾವಡಾ ಜೋಯಿಡಾ,  ಜಿಎಮ್ ಶೆಟ್ಟಿ ಅಂಕೋಲಾ, ಪಾಂಡು ನಾಯ್ಕ ಬೆಳಕೆ, ಸುರೇಶ್ ಮೇಸ್ತ ಹೊನ್ನಾವರ, ರಾಜೇಶ್ ಮಿತ್ರ ನಾಯ್ಕ ಅಂಕೋಲಾ, ಸುನೀಲ್ ನಾಯ್ಕ, ದಿನೇಶ್ ನಾಯ್ಕ, ದಿವಾಕರ್ ನಾಯ್ಕ ಸಿದ್ದಾಪುರ, ಗೀರೀಶ ನಾಯ್ಕ ಚಿತ್ತಾರ ಮುಂತಾದವರು ನೇತ್ರತ್ವ ವಹಿಸಿದ್ದರು.

Similar News