×
Ad

ಫ್ರಾನ್ಸ್‌ ಫೈನಲ್‌ನಲ್ಲಿ ಸೋತ ಬಳಿಕ ತಮ್ಮ ದೇಶದ ಅಧ್ಯಕ್ಷರನ್ನು ಎಂಬಾಪೆ ನಿರ್ಲಕ್ಷಿಸಿದ್ದರೇ?: ವೀಡಿಯೋ ವೈರಲ್‌

Update: 2022-12-19 16:41 IST

ಖತರ್ : ರವಿವಾರ ರಾತ್ರಿ ನಡೆದ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಆರ್ಜೆಂಟಿನಾ ವಿರುದ್ಧ ಫ್ರಾನ್ಸ್‌ ತಂಡ ಸೋತ ಬೆನ್ನಲ್ಲೇ ಪಂದ್ಯದಲ್ಲಿ ಹ್ಯಾಟ್ರಿಕ್‌ ಸಾಧಿಸಿದ್ದ ಫ್ರಾನ್ಸಿನ ಕಿಲಿಯನ್‌ ಎಂಬಾಪೆ ಅವರು ನಿರಾಸೆಯಲ್ಲಿದ್ದರು. ಆ ಸಂದರ್ಭ ಅವರನ್ನು ಸಂತೈಸಲು ಅವರ ದೇಶದ ಆದ್ಯಕ್ಷರಾದ ಇಮಾನುಯಲ್ ಮ್ಯಾಕ್ರೋನ್ ಅವರು ಹತ್ತಿರ ಬಂದು ಸಮಾಧಾನಿಸಲು ಯತ್ನಿಸಿದರೂ ಎಂಬಾಪೆ ಮಾತ್ರ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸದೆ ನಿರ್ಲಿಪ್ತತೆ ತೋರಿದ್ದಾರೆನ್ನಲಾದ ವಿಡಿಯೋ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ವಿಡಿಯೋಗಳು ಹರಿದಾಡುತ್ತಿದ್ದು ಎಂಬಾಪೆ ಅವರು ತಮ್ಮ ದೇಶದ ಅಧ್ಯಕ್ಷರನ್ನು ಅವಗಣಿಸಿದ್ದಾರೆಯೇ ಎಂದು ಹಲವರು ಪ್ರಶ್ನಿಸಲಾರಂಭಿಸಿದ್ದಾರೆ.

ಪಂದ್ಯ ಮುಗಿದ ನಂತರ ರೆಫ್ರೀ ಅಂತಿಮ ವಿಸಲ್‌ ಮಾಡಿದಾಗ ಎಂಬಾಪೆ ಅವರು ಅಂಗಣದಲ್ಲಿ ಅತ್ಯಂತ ನಿರಾಸೆಯಿಂದ ಕುಳಿತು ಬಿಟ್ಟರು. ಅತ್ತ ಆರ್ಜೆಂಟಿನಾ ತಂಡ  ಸಂಭ್ರಮಾಚರಣೆಯಲ್ಲಿತ್ತು. ಗಣ್ಯರ ಜೊತೆ ಆಸೀನರಾಗಿದ್ದ ಫ್ರಾನ್ಸ್‌ ಅಧ್ಯಕ್ಷ ಇಮಾನುಯಲ್ ಮ್ಯಾಕ್ರೋನ್ ಅವರು ಎಂಬಾಪೆ ಅವರತ್ತ ಬಂದು ಅವರನ್ನು ಸಂತೈಸಿದರೂ ಎಂಬಾಪೆ ಇದರಿಂದ ಸಮಾಧಾನಗೊಂಡಂತಿರಲಿಲ್ಲ.

ನಂತರ ಫ್ರಾನ್ಸ್‌ ತಂಡ ವೇದಿಕೆಗೆ ಬಂದು ಬೆಳ್ಳಿ ಪದಕಗಳನ್ನು ಪಡೆದಾಗಲೂ ಮ್ಯಾಕ್ರೋನ್ ಅವರು ಎಂಬಾಪೆ ಅವರನ್ನು ಆಲಂಗಿಸಿ ಕೆಲ ಮಾತುಗಳನ್ನಾಡಿದರೂ ಎಂಬಾಪೆ ಮತ್ತೆ ನಿರ್ಲಿಪ್ತತೆ ತೋರಿದ್ದರು. ಈ ಕುರಿತಾದ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

Similar News