×
Ad

ಥೈಲ್ಯಾಂಡ್: ನೌಕಾಪಡೆಯ ಹಡಗು ಮುಳುಗಡೆ; 31 ಮಂದಿ ನಾಪತ್ತೆ

Update: 2022-12-19 21:51 IST

ಬ್ಯಾಂಕಾಕ್, ಡಿ.19: ಥೈಲ್ಯಾಂಡ್ ಕೊಲ್ಲಿಯಲ್ಲಿ ಗಸ್ತು ತಿರುಗುತ್ತಿದ್ದ ಥೈಲ್ಯಾಂಡ್ ನೌಕಾಪಡೆಯ ಹಡಗು ಸಮುದ್ರದಲ್ಲಿ ಮುಳುಗಿದ್ದು ಹಡಗಿನಲ್ಲಿ 100ಕ್ಕೂ ಅಧಿಕ ನಾವಿಕರಿದ್ದರು ಎಂದು ವರದಿಯಾಗಿದೆ.

3 ಹಡಗು ಹಾಗೂ 2 ಹೆಲಿಕಾಪ್ಟರ್ ಬಳಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು 75 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 31 ಮಂದಿ ನಾಪತ್ತೆಯಾಗಿದ್ದು ಅವರ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ನೌಕಾಪಡೆಯ ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಬೀಸುತ್ತಿರುವ ಬಿರುಗಾಳಿಯಿಂದಾಗಿ ಹಡಗಿನೊಳಗೆ ನೀರು ನುಗ್ಗಿದೆ. ಬಿರುಗಾಳಿಯ ಹೊಡೆತಕ್ಕೆ ಹಡಗಿನ ವಿದ್ಯುತ್‌ವ್ಯವಸ್ಥೆಗೆ ಹಾನಿಯಾದ್ದರಿಂದ ಪಂಪ್ ಬಳಸಿ ಹಡಗಿನೊಳಗಿನ ನೀರನ್ನು ಹೊರಸಾಗಿಸಲು ಸಾಧ್ಯವಾಗದೆ ಹಡಗು ಮುಳುಗಿದೆ ಎಂದು ನೌಕಾಪಡೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Similar News