ಮಾರ್ನಬೈಲ್ ಎಸ್.ಎಂ.ಆರ್. ಪಬ್ಲಿಕ್ ಸ್ಕೂಲ್ ಕ್ರೀಡೋತ್ಸವ

Update: 2022-12-20 04:31 GMT

ಬಿ.ಸಿ.ರೋಡ್ : ಸಜಿಪಮುನ್ನೂರು ಗ್ರಾಮದ ಮಾರ್ನಬೈಲ್ ಎಸ್.ಎಂ.ಆರ್. ಪಬ್ಲಿಕ್ ಸ್ಕೂಲ್ ನ ವಾರ್ಷಿಕ ಕ್ರೀಡೋತ್ಸವ ಇತ್ತೀಚೆಗೆ ನಡೆಯಿತು.

ಶಾಲಾ ಸಂಚಾಲಕ ಅಬ್ದುಲ್ ಲತೀಫ್ ಕ್ರೀಡೋತ್ಸವ ಉದ್ಘಾಟಿಸಿದರು. ಕಾವಳಪಡೂರು ಶಾಲಾ ಮುಖ್ಯ ಶಿಕ್ಷಕ ಶೇಖ್ ಆದಂ ಸಾಹೇಬ್ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಫಾತಿಮತ್  ಝಹೀರಾ ಉಪಸ್ಥಿತರಿದ್ದರು.

ಇದೇ ವೇಳೆ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿಯರಾದ ಪದ್ಮಲತಾ ಪಿ. ಸ್ವಾಗತಿಸಿ, ಶಬ್ನ ಮುನೀಸಾ ವಂದಿಸಿದರು. ದಿಶಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು.

Similar News