ಮಂಗಳೂರು ವಿವಿ ಫಲಿತಾಂಶ ವಿಳಂಬ ಖಂಡಿಸಿ ಎಬಿವಿಪಿ ಪ್ರತಿಭಟನೆ: ವಿವಿ ಸಿಂಡಿಕೇಟ್ ಸಭೆಗೆ ನುಗ್ಗಲು ಯತ್ನ
Update: 2022-12-20 12:56 IST
ಮಂಗಳೂರು: ಮಂಗಳೂರು ವಿವಿ ಫಲಿತಾಂಶ ವಿಳಂಬ ಖಂಡಿಸಿ ಎಬಿವಿಪಿ ಕಾರ್ಯಕರ್ತರು ವಿವಿ ಸಿಂಡಿಕೇಟ್ ಸಭೆಗೆ ನುಗ್ಗಲು ಯತ್ನಿಸಿದ ಘಟನೆ ಮಂಗಳೂರು ವಿವಿಯಲ್ಲಿ ಮಂಗಳವಾರ ನಡೆದಿದೆ. ಈ ವೇಳೆ ಪೊಲೀಸರು-ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ನಡೆದು ವಾಗ್ವಾದ ನಡೆಯಿತು.
ಮಂಗಳೂರಿನ ಕೊಣಾಜೆಯ ಮಂಗಳೂರು ವಿ.ವಿ ಯ ಆಡಳಿತ ಸೌಧಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದರು.
ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ಸತಾಯಿಸುತ್ತಿದೆ. ಅಂಕಪಟ್ಟಿ ಬಾರದೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲಾಗದೇ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಅಳಲನ್ನು ತೊಡಿಕೊಂಡರು.