×
Ad

ಅಡ್ಡೂರು ಕ್ಲಬ್ ನ ನೂತನ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ

Update: 2022-12-20 14:02 IST

ಅಡ್ಡೂರು:  ಫ್ರೆಂಡ್ಸ್ ಸರ್ಕಲ್ ಕೆಳಗಿನಕೆರೆ ಅಡ್ಡೂರು ಕ್ಲಬ್ ಇದರ ನೂತನ ಕಚೇರಿ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ರವಿವಾರ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು,  ಹಿರಿಯರ ಮಾರ್ಗದರ್ಶನದಲ್ಲಿ ಸಾಮಾಜಿಕ ಸುಧಾರಣೆಗೆ ಒತ್ತು ನೀಡುವ ಸಲುವಾಗಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕ್ಲಬ್ ನ ಯುವಕರ ಕಾರ್ಯ ಶ್ಲಾಘನೀಯ ಎಂದರು.

ಇದೇ ವೇಳೆ ಆಯೋಜಿಸಿದ್ದ ಕರಾವಳಿ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಸಹಯೋಗದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾದಲ್ಲಿ 140 ಶಿಬಿರಾರ್ಥಿಗಳು ಭಾಗವಹಿಸಿದರು. ಮತದಾರ ಪಟ್ಟಿಯಲ್ಲಿ 40 ಹೊಸ ಸೇರ್ಪಡೆ 25 ಮಂದಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ. ಸದಸ್ಯ ಯು.ಪಿ ಇಬ್ರಾಹೀಂ, ಗುರುಪುರ ಗ್ರಾ.ಪಂ. ಸದಸ್ಯ ಎ.ಕೆ. ಅಶ್ರಫ್, ಉದ್ಯಮಿಗಳಾದ ಎ.ಕೆ. ಆರೀಸ್, ನೌಫಲ್ ಉದ್ದಬೆಟ್ಟು,  ಲತೀಫ್ ಗುರುಪುರ, ಅಡ್ಡೂರು ಬದ್ರಿಯಾ ಜುಮಾ ಮಸೀದಿ  ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ, ಉಪಾಧ್ಯಕ್ಷ ಝೈನ್ ಗರಡಿ, ಎಫ್.ಸಿ.ಕೆ ಅಧ್ಯಕ್ಷ ಅಲಿಯಾರ್ ಕೆಳಗಿನಕೆರೆ,  ಕ್ಲಬ್ ಗೌರವಾಧ್ಯಕ್ಷ ಜಬ್ಬಾರ್ ಕೆಳಗಿನಕೆರೆ, ಡಾ.ಇ.ಕೆ. ಸಿದ್ದೀಕ್, ಬಾಷಾ ಗುರುಪುರ, ಎ.ಕೆ.ಮೊಹಮ್ಮದ್, ಇದಿನಬ್ಬ ಕೆಳಗಿನಕೆರೆ, ಯಾಕೂಬ್ ಕೆಳಗಿನಕೆರೆ, ಬಿ.ಎಲ್.ಒ ನಮಿತಾ ಮೊದಲಾದವರು ಉಪಸ್ಥಿತರಿದ್ದರು.

ಕೆಳಗಿನಕೆರೆ ಮಸೀದಿ ಉಸ್ತಾದ್ ಉಬೈದುಲ್ಲಾ ಫೈಝಿ ದುಆ ನೆರವೇರಿಸಿದರು. ಕ್ಲಬ್ ಸಲಹೆಗಾರ ಫಾರೂಕ್ ಕೆಳಗಿನಕೆರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Similar News