ಹರ್ಯಾಣ ಪ್ರವೇಶಿಸಿದ ಭಾರತ್ ಜೋಡೊ ಪಾದಯಾತ್ರೆ

Update: 2022-12-21 07:20 GMT

ನುಹ್ಲ್(ಹರ್ಯಾಣ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಪಾದಯಾತ್ರೆ ಬುಧವಾರ ಬೆಳಗ್ಗೆ ಹರ್ಯಾಣ ಪ್ರವೇಶಿಸಿದೆ.

ರಾಜಸ್ಥಾನ ಗಡಿಯಲ್ಲಿರುವ ನುಹ್ಲ್ ಬಳಿ ಪಾದಯಾತ್ರೆ ಹರ್ಯಾಣ ಪ್ರವೇಶಿಸಿದೆ. ಈ ವೇಳೆ  ಹರ್ಯಾಣದ ಕಾಂಗ್ರೆಸ್ ನಾಯಕರು ಸ್ಥಳದಲ್ಲಿ ಹಾಜರಿದ್ದು, ಪಾದಯಾತ್ರೆ ಹಾಗೂ ರಾಹುಲ್ ಗಾಂಧಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ, ರಣದೀಪ್ ಸಿಂಗ್ ಸುರ್ಜೆವಾಲಾ, ದೀಪೇಂದ್ರ ಸಿಂಗ್ ಹೂಡಾ, ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ ಉದಯ್ ಬಾನ್ ಹಾಜರಿದ್ದರು.

ಬಿಜೆಪಿ ಆಡಳಿತವಿರುವ ಹರ್ಯಾಣಕ್ಕೆ ಪಾದಯಾತ್ರೆಯು 2 ಹಂತದಲ್ಲಿ ನಡೆಯಲಿದೆ. ಇಂದು ಆಗಮಿಸಿದ ಪಾದಯಾತ್ರೆ ಡಿ.23ರಂದು ರಾಜ್ಯದಿಂದ ಹೊರಹೋಗಿ ಮತ್ತೆ ಉತ್ತರಪ್ರದೇಶದಿಂದ ಬರುವಾಗ ಪಾಣಿಪತ್ ಮಾರ್ಗವಾಗಿ ಜ.6ರಂದು ಮತ್ತೊಮ್ಮೆ ಹರ್ಯಾಣ ಪ್ರವೇಶಿಸಲಿದೆ.

Similar News