×
Ad

ಕಾರ್ಕಳ: ಏಕಾಏಕಿ ಬೆಂಕಿಗಾಹುತಿಯಾದ ಸ್ಕೂಟರ್

Update: 2022-12-23 11:29 IST

ಕಾರ್ಕಳ, ಡಿ.23: ಚಲಿಸುತ್ತಿದ್ದ ವೇಳೆ ದ್ವಿಚಕ್ರ ವಾಹನವೊಂದರ ಇಂಜಿನ್ ಇದ್ದಕ್ಕಿದ್ದಂತೆ ಆಫ್ ಆಗಿ, ಇಡೀ ಸ್ಕೂಟರ್ ಬೆಂಕಿಗಾಹುತಿಯಾದ ಘಟನೆ ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿ ನಡೆದಿದೆ.

ಎಣ್ಣೆಹೊಳೆ ಸೇತುವೆ ಬಳಿ ತಲುಪಿದಾಗ ಏಕಾಏಕಿ ಸ್ಕೂಟರ್ ಆಫ್ ಆಗಿದೆ. ಈ ವೇಳೆ ಸವಾರ ಸ್ಕೂಟರ್ ನಿಂದ ಇಳಿದು ಏನಾಗಿದೆ ಎಂದು ಪರಿಶೀಲಿಸುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಕಾರ್ಕಳ ಮೂಲದವರಿಗೆ ಸೇರಿದ ಸ್ಕೂಟರ್ ಕ್ಷಣಾರ್ಧದಲ್ಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Similar News