×
Ad

ಕಾಸರಗೋಡು: ಹಲವು ಪ್ರಕರಣಗಳ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ ಪೊಲೀಸರು

Update: 2022-12-23 19:27 IST

ಕಾಸರಗೋಡು: ಹಲವು ಪ್ರಕರಣಗಳ ಆರೋಪಿಯೋರ್ವನನ್ನು ಸಿನಿಮೀಯ ಶೈಲಿಯಲ್ಲಿ ಕಾಸರಗೋಡು ಪೊಲೀಸರು ಬಂಧಿಸಿದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪಡನ್ನಕ್ಕಾಡ್ ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ .

ಅಂಬಲತ್ತರದ  ರಂಶೀದ್ ಬಂಧಿತ ಆರೋಪಿ. ಕಾಫಾ ಕಾಯ್ದೆಯನ್ನು ಹೂಡಿ ಈತನನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು .

ಈತ ಗುರುವಾರ ಮಧ್ಯಾಹ್ನ ಕಾಸರಗೋಡಿಗೆ ಆಗಮಿಸುತ್ತಿರುವುದಾಗಿ ಪೊಲೀಸರಿಗೆ  ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪಡನ್ನಕ್ಕಾಡ್ ಮೇಲ್ಸೇತುವೆಯಲ್ಲಿ ವಾಹನ ತಡೆದು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .  

ಈತನ ಬಳಿಯಿಂದ  1. 88 ಗ್ರಾಂ  ಎಂ ಡಿ ಎಂ ಎ  ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ .  ಕಳವು, ಹಲ್ಲೆ, ಮಾದಕವಸ್ತು ಸಾಗಾಟ ಸೇರಿದಂತೆ ಹಲವು  ಪ್ರಕರಣಗಳಲ್ಲಿ ಶಾಮೀಲಾಗಿರುವ ಈತನನ್ನು ಬಂಧಿಸಿದ್ದ ಪೊಲೀಸರು ಕಾಫಾ ಕಾಯ್ದೆ ಹೂಡಿ ಗಡಿಪಾರು ಮಾಡಲಾಗಿತ್ತು. ಕಾಸರಗೋಡು ಜಿಲ್ಲೆಗೆ ಪ್ರವೇಶಿಸದಂತೆ  ಈತನಿಂದ ನಿರ್ಬಂಧ ಹೇರಲಾಗಿತ್ತು . ಈ ಆದೇಶ ಉಲ್ಲಂಘಿಸಿ ಈತ ಜಿಲ್ಲೆಗೆ ಪ್ರವೇಶಿಸಿದ್ದು , ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈತ ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ . ರಂಶೀದ್ ಗೆ ನೇರವಾದ ಝುಬೈರ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News