ಅಮೆರಿಕ: ಉನ್ನತ ರಾಜತಾಂತ್ರಿಕ ಹುದ್ದೆಗೆ ಭಾರತೀಯ ಅಮೆರಿಕನ್ ವರ್ಮ ನಾಮನಿರ್ದೇಶನ

Update: 2022-12-25 02:10 GMT

ವಾಷಿಂಗ್ಟನ್: ಈ ಹಿಂದೆ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿದ್ದ ಭಾರತೀಯ ಅಮೆರಿಕನ್ ರಿಚರ್ಡ್ ವರ್ಮರನ್ನು ಅಮೆರಿಕದ ಉನ್ನತ ರಾಜತಾಂತ್ರಿಕ ಹುದ್ದೆಗೆ ಅಧ್ಯಕ್ಷ ಜೋ ಬೈಡನ್(Joe Biden) ನಾಮನಿರ್ದೇಶನ ಮಾಡಿದ್ದಾರೆ ಎಂದು ವರದಿಯಾಗಿದೆ.

ವಿದೇಶಾಂಗ ಇಲಾಖೆಯಲ್ಲಿನ ಉನ್ನತ ಹುದ್ದೆ ಇದಾಗಿದೆ. 2015ರ ಜನವರಿ 16ರಿಂದ 2017 ಜನವರಿ 20ರವರೆಗೆ ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದ ವರ್ಮ, ಒಬಾಮಾ ಆಡಳಿತದ ಸಂದರ್ಭ ಶಾಸಕಾಂಗ ವ್ಯವಹಾರಗಳ ಸಹಾಯಕ ಕಾರ್ಯದರ್ಶಿಯಾಗಿದ್ದರು. ಪ್ರಸ್ತುತ ‘ಮಾಸ್ಟರ್ ಕಾರ್ಡ್’ನ ಜಾಗತಿಕ ಸಾರ್ವಜನಿಕ ಕಾರ್ಯನೀತಿಯ ಮುಖ್ಯಸ್ಥರಾಗಿದ್ದಾರೆ.

ನಾಮನಿರ್ದೇಶನವನ್ನು ಅಮೆರಿಕದ ಸಂಸತ್ತು ದೃಢಪಡಿಸಿದರೆ, ರಿಚರ್ಡ್ ವರ್ಮಾ ಅವರು ವಿದೇಶಾಂಗ ಇಲಾಖೆಯಲ್ಲಿ ಅತ್ಯುನ್ನತ ಶ್ರೇಣಿಯ ಭಾರತೀಯ ಅಮೆರಿಕನ್ ಅಧಿಕಾರಿ ಆಗಲಿದ್ದಾರೆ.

Similar News