ದ್ವಿತೀಯ ಟೆಸ್ಟ್: ಬಾಂಗ್ಲಾದೇಶ ಆಟಗಾರರ ಸಂಭ್ರಮಾಚರಣೆಯ ರೀತಿಗೆ ವಿರಾಟ್ ಕೊಹ್ಲಿ ಅಸಮಾಧಾನ

Update: 2022-12-25 08:53 GMT

ಢಾಕಾ: ದ್ವಿತೀಯ ಟೆಸ್ಟ್ ಪಂದ್ಯದ ಭಾರತದ ಎರಡನೇ ಇನಿಂಗ್ಸ್ ನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದಾಗ ಬಾಂಗ್ಲಾದೇಶ ಆಟಗಾರರು ಹುಚ್ಚೆದ್ದು ಕುಣಿದು ಸಂಭ್ರಮಾಚರಣೆ ಮಾಡಿದರು. ಆದರೆ ಕೊಹ್ಲಿಗೆ ಬಾಂಗ್ಲಾ ಆಟಗಾರರ ವರ್ತನೆ ಇಷ್ಟವಾಗದೆ ಈ ಕುರಿತು ಬಾಂಗ್ಲಾ ನಾಯಕ ಶಾಕಿಬ್ ಅಲ್ ಹಸನ್ ಬಳಿ ತನ್ನಅಸಮಾಧಾನ ವ್ಯಕ್ತಪಡಿಸಿದರು. ಆಗ ಅಂಪೈರ್ ಗಳು ಸಮಾಧಾನಪಡಿಸಿದ  ಘಟನೆ ನಡೆದಿದೆ.

ದ್ವಿತೀಯ ಟೆಸ್ಟ್ ನ 3ನೇ ದಿನದಾಟವಾದ ಶನಿವಾರ ಈ ಘಟನೆ ನಡೆದಿದೆ. ಪಿಚ್ ಹೆಚ್ಚು ಸ್ಪಿನ್ ಬೌಲರ್ ಗೆ ನೆರವು ನೀಡುತ್ತಿತ್ತು.  ಡಿಆರ್‌ಎಸ್ ನಿಂದಾಗಿ  ತೈಜುಲ್ ಇಸ್ಲಾಮ್‌ಗೆ ಲೆಗ್ ಬಿಫೋರ್ ಆಗುವುದರಿಂದ ಬಚಾವಾದ ಕೊಹ್ಲಿ (22 ಎಸೆತಗಳಲ್ಲಿ 1 ರನ್)19.5ನೇ ಓವರ್ ನಲ್ಲಿ ಮೆಹಿದಿ ಹಸನ್ ಮಿರಾಝ್ ಬೌಲಿಂಗ್ ನಲ್ಲಿ ಮೊಮಿನುಲ್ ಹಕ್ ಪಡೆದ ಕ್ಯಾಚ್ ನಲ್ಲಿ ಔಟಾದರು.

ಕೊಹ್ಲಿ ಬೇಗನೆ ಔಟಾದ ಕಾರಣ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನೈಟ್ ವಾಚ್‌ಮನ್ ಅಕ್ಷರ್ ಪಟೇಲ್ (26 ಬ್ಯಾಟಿಂಗ್) ಅವರನ್ನು 15 ಓವರ್‌ಗಳಿಗಿಂತ ಹೆಚ್ಚು ಬಾಕಿ ಇರುವಾಗಲೇ ಮೈದಾನಕ್ಕೆ ಕಳುಹಿಸಿದರು.

Similar News