×
Ad

ಡಿ.26ರಂದು ಮಿಲಿಂದಾ ಸೋಮನ್ ಮಂಗಳೂರಿಗೆ

Update: 2022-12-25 15:46 IST

ಮಂಗಳೂರು,ಡಿ.25: ಖ್ಯಾತ ಮೊಡೆಲ್ ಮಿಲಿಂದ ಸೋಮನ್ ವಾಯುಮಾಲಿನ್ಯದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರಂಭಿಸಿರುವ ಗ್ರೀನ್ ರೈಡ್ 2.0 ಸೈಕಲ್ ಯಾತ್ರೆಯ ಮೂಲಕ ಡಿ.26ರಂದು ಮಂಗಳೂರು ತಲುಪಲಿದ್ದಾರೆ.

ಡಿ.19 ಮುಂಬೈಯಿಂದ ಆರಂಭಿಸಿರುವ  ಈ ಸೈಕಲ್ ಜಾಥಾ 8 ದಿನಗಳ ಬಳಿಕ 10 ನಗರಗಳನ್ನು ಕ್ರಮಿಸಿ ಡಿ.26ರಂದು 4 ಗಂಟೆಗೆ ಪಂಪ್ ವೆಲ್, ಮಹಾವೀರ ವೃತ್ತದ ಮೂಲಕ ಮಂಗಳೂರಿಗೆ ಆಗಮಿಸಲಿದೆ. ಬಳಿಕ 5 ಗಂಟೆಗೆ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ರೀಜನಲ್ ಕಚೇರಿಯಲ್ಲಿ ಬ್ಯಾಂಕ್ ಮಹಾ ಪ್ರಬಂಧಕಿ ಹಾಗೂ ವಿಭಾಗೀಯ ಮುಖ್ಯಸ್ಥೆ ಗಾಯತ್ರಿ ಆರ್. ಅವರನ್ನು  ಭೇಟಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Similar News