ಸರ್ಬಿಯಾ: ಅಮೋನಿಯಾ ಸೋರಿಕೆ; ಪೈರಟ್ ನಗರದಲ್ಲಿ ತುರ್ತುಪರಿಸ್ಥಿತಿ ಜಾರಿ‌

Update: 2022-12-26 16:53 GMT

ಬೆಲ್ಗ್ರೇಡ್, ಡಿ.26: ಆಗ್ನೇಯ ಸೈಬೀರಿಯಾ(Siberia)ದ ಪೈರಟ್ ನಗರದಲ್ಲಿ ಗೂಡ್ಸ್ ರೈಲು ಹಳಿತಪ್ಪಿ ಮಗುಚಿಬಿದ್ದ ಕಾರಣ ಅಮೋನಿಯಾ(Ammonia) ಸೋರಿಕೆಯಾದ ಹಿನ್ನೆಲೆಯಲ್ಲಿ 15 ಮಂದಿ ಅಸ್ವಸ್ಥಗೊಂಡಿದ್ದು ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

20 ಬೋಗಿಗಳ ರೈಲು ಬಲ್ಗೇರಿಯಾದ ಅಗ್ರೊಪೊಲಿಚಿಮ್ ನಿಂದ ಸರ್ಬಿಯಾದ ರಸಗೊಬ್ಬರ ಕಾರ್ಖಾನೆಗೆ ಅಮೋನಿಯಾ ಸಾಗಿಸುತ್ತಿತ್ತು. ಸರ್ಬಿಯಾದ ಸಬಾಕ್ ನಗರದ ಹೊರವಲಯದಲ್ಲಿ 2 ಬೋಗಿಗಳು ಹಳಿತಪ್ಪಿದ ಕಾರಣ ರೈಲು ಉರುಳಿಬಿದ್ದಿದೆ. ಅಮೋನಿಯಾ ಸೋರಿಕೆಯಾಗಿ ಮಗುವಿನ ಸಹಿತ 15 ಮಂದಿ ಅಸ್ವಸ್ಥಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೈರಟ್ ನಗರದಲ್ಲಿನ ಶಾಲೆ, ಶಿಶುವಿಹಾರಗಳಿಗೆ ಸೋಮವಾರ ರಜೆ ಘೋಷಿಸಿದ್ದು ಅಗತ್ಯ ಬಿದ್ದರೆ ಮಾತ್ರ ಮನೆಯಿಂದ ಹೊರತೆರಳುವಂತೆ ಜನರಿಗೆ ಸೂಚನೆ ನೀಡಲಾಗಿದೆ.

Similar News