ಈ ವಾರಾಂತ್ಯ ಪುಟಿನ್-ಜಿಂಪಿಂಗ್ ಮಧ್ಯೆ ಸಭೆ: ಡಿಮಿಟ್ರಿ ಪೆಸ್ಕೋವ್

Update: 2022-12-26 16:57 GMT

ಮಾಸ್ಕೋ, ಡಿ.26: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್(Vladimir Putin) ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್(Xi Jinping) ಈ ವರ್ಷಾಂತ್ಯದೊಳಗೆ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ರನ್ನುದ್ದೇಶಿಸಿ ರಶ್ಯನ್ ಸುದ್ಧಿಸಂಸ್ಥೆ ತಾಸ್ ವರದಿ ಮಾಡಿದೆ.

ಉಕ್ರೇನ್ ಮೇಲಿನ ಆಕ್ರಮಣದ ಬಳಿಕ ಪಾಶ್ಚಿಮಾತ್ಯ ದೇಶಗಳು ರಶ್ಯದ ವಿರುದ್ಧ ಆರ್ಥಿಕ ದಿಗ್ಬಂಧನ ಘೋಷಿಸಿದ ಬಳಿಕ ಚೀನಾ ರಶ್ಯದ ಬೆಂಬಲಕ್ಕೆ ನಿಂತಿದೆ. ಉಭಯ ದೇಶಗಳ ನಡುವಿನ ಸಹಭಾಗಿತ್ವಕ್ಕೆ ಯಾವುದೇ ಮಿತಿಗಳಿಲ್ಲ ಎಂದು ಚೀನಾ ಅಧ್ಯಕ್ಷ ಜಿಂಪಿಂಗ್ ಘೋಷಿಸಿದ್ದರು.

ಕಳೆದ ವಾರ ರಶ್ಯದ ಮಾಜಿ ಅಧ್ಯಕ್ಷ, ಈಗ ಭದ್ರತಾ ಸಮಿತಿಯ ಅಧ್ಯಕ್ಷರಾಗಿರುವ ಡಿಮಿಟ್ರಿ ಮೆಡ್ವಡೇವ್ ಚೀನಾಕ್ಕೆ ಭೇಟಿ ನೀಡಿ ಜಿಂಪಿಂಗ್ ಜತೆ ಮಾತುಕತೆ ನಡೆಸಿದ್ದರು.

Similar News