×
Ad

ಅಫ್ಘಾನ್: ಕಾರುಬಾಂಬ್ ಸ್ಫೋಟದಲ್ಲಿ ಪೊಲೀಸ್ ಸಹಿತ 3 ಮಂದಿ ಮೃತ್ಯು

Update: 2022-12-26 23:35 IST

ಕಾಬೂಲ್, ಡಿ.26: ಅಫ್ಘಾನಿಸ್ತಾನದ ಬದಖ್ಶಾನ್ ಪ್ರಾಂತದಲ್ಲಿ ಸೋಮವಾರ ಸಂಭವಿಸಿದ ಕಾರುಬಾಂಬ್ ಸ್ಫೋಟದಲ್ಲಿ ಪೊಲೀಸ್ ಅಧಿಕಾರಿ ಸಹಿತ 3 ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿಟಕೋರ್(Abdul Nafitakor) ಹೇಳಿದ್ದಾರೆ.
ಬದಖ್ಶಾನ್ ಪೊಲೀಸ್ ಕೇಂದ್ರಕಚೇರಿಯ ಬಳಿ ಸ್ಫೋಟ ನಡೆದಿದ್ದು ಇತರ ಇಬ್ಬರು ಗಾಯಗೊಂಡಿದ್ದಾರೆ.

ಸ್ಫೋಟಕ್ಕೆ ಸಂಬಂಧಿಸಿ 4 ಶಂಕಿತರನ್ನು ಬಂಧಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

Similar News