ಅಮ್ಮೆಂಬಳ ಜುಮಾ ಮಸೀದಿಗೆ ಫಾ.ಮೈಕಲ್ ಡಿಸಿಲ್ವಾ ಸೌಹಾರ್ದ ಭೇಟಿ

Update: 2022-12-27 08:41 GMT

ಅಮ್ಮೆಂಬಳ: ಕ್ರಿಸ್ಮಸ್ ಪ್ರಯುಕ್ತ ಅಮ್ಮೆಂಬಳಕ್ಕೆ ರಿಫಾಯಿಯ್ಯಾ ಜುಮಾ ಮಸೀದಿಗೆ ಅಮ್ಮೆಂಬಳ ಸೈಂಟ್ ಥೋಮಸ್ ಇಗರ್ಜಿಯ ಧರ್ಮಗುರು ಫಾದರ್ ಮೈಕಲ್ ಡಿಸಿಲ್ವಾ ಅವರು ಸೌಹಾರ್ದ ಭೇಟಿ ನೀಡಿ, ಸಿಹಿ ಹಂಚಿದರು.

ಈ ವೇಳೆ ಮಾತನಾಡಿದ ಅವರು, ಧರ್ಮಗಳು ಬೇರೆಯಾದರೂ ಏಸುಕ್ರಿಸ್ತರ ಬಗ್ಗೆ, ಮರಿಯಂ ಅವರ ಬಗ್ಗೆ ಬೈಬಲ್ ಮತ್ತು ಕುರಾನ್‌ಗಳು ಹೇಳುತ್ತದೆ. ಮುಸ್ಲಿಮ್  ಮತ್ತು ಕ್ರಿಶ್ಚಿಯನ್ನರು ಸಹೋದರರೇ ಆಗಿದ್ದಾರೆ ಎಂದು ಹೇಳಿದರು.

ರಿಫಾಯಿಯಾ ಮಸೀದಿಯ ಮುಖ್ಯೋಪಾಧ್ಯಾಯ ಫಾರೂಖ್ ಸ‌ಅದಿ ಮಾತನಾಡಿ, ಧರ್ಮಗಳು ಶಾಂತಿಯನ್ನು ಬೋಧಿಸುತ್ತದೆ. ಈಗಿನ ಕೆಟ್ಟ ಪರಿಸ್ಥಿತಿಯಲ್ಲಿ ಇಂತಹ ಭೇಟಿಗಳು ಕಾಲದ ಬೇಡಿಕೆ ಎಂದು ಹೇಳಿದರು. 

ಈ‌ ವೇಳೆ ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಬರ್ಟ್ ಡಿಸೋಜಾ, ರಿಫಾಯಿಯಾ ಜುಮಾ ಮಸೀದಿ ಅಧ್ಯಕ್ಷ ಶಮೀರ್ ಅಹ್ಮದ್, ಜೈ ಭಾರತ್ ಯುವಕ ಮಂಡಲದ ಅಧ್ಯಕ್ಷ ರಿಯಾಝ್ ಕೆ.ಬಿ, ಜಾರದಗುಡ್ಡೆ ಎಸ್ಸೆಸ್ಸೆಫ್ ಅಧ್ಯಕ್ಷ ಶಮೀರ್ ಬೋಳಿಯಾರ್ ಹಾಗೂ ಇತರರು ಉಪಸ್ಥಿತರಿದ್ದರು.

Similar News