×
Ad

ಹಾವೇರಿಯಲ್ಲಿ ಕಾಸರಗೋಡಿನ ಕಾರು ಅಪಘಾತ ಪ್ರಕರಣ: ಗಾಯಾಳು ಮಗು ಮೃತ್ಯು, ಮೃತರ ಸಂಖ್ಯೆ ಮೂರಕ್ಕೆ ಏರಿಕೆ

Update: 2022-12-28 10:37 IST

ಕಾಸರಗೋಡು: ಹಾವೇರಿಯಲ್ಲಿ ಕಾರು ಮತ್ತು ಸರಕಾರಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ  ಮೂರು ವರ್ಷದ ಮಗು ಮೃತಪಟ್ಟಿದೆ. ಇದರೊಂದಿಗೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೇರಿದೆ. ಗಾಯಗೊಂಡ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ತಳಂಗರೆ ನುಸ್ರತ್ ನಗರದ ಸಿಯಾದ್ - ಸಜ್ನ ದಂಪತಿ ಪುತ್ರ ಮುಹಮ್ಮದ್(3) ಮೃತಪಟ್ಟ ಮಗು. ಬುಧವಾರ ಬೆಳಗ್ಗೆ ಸಂಭವಿಸಿದ ಈ ಅಪಘಾತದಲ್ಲಿ ಸಿಯಾದ್ ಅವರ ತಂದೆ ಮುಹಮ್ಮದ್(65), ತಾಯಿ ಆಯಿಶಾ(62) ಮೃತಪಟ್ಟಿದ್ದರು. ಸಿಯಾದ್ ಮತ್ತು ಸಜ್ನ ಹಾವೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಹಮ್ಮದ್ ಮತ್ತು ಆಯಿಶಾರ ಮೃತದೇಹಗಳನ್ನು ಹಾನಗಲ್ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಇಂದು ಸಂಜೆ ವೇಳೆಗೆ  ಊರಿಗೆ ತರಲಾಗುವುದು. ಮೂರು ವರ್ಷದ ಮಗು ಮುಹಮ್ಮದ್ ನ ಮೃತದೇಹ ಖಾಸಗಿ ಆಸ್ಪತ್ರೆಯ ಶವಾಗಾರ ದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಊರಿಗೆ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬುಧವಾರ ಬೆಳಗ್ಗೆ ಕಾರು ಮತ್ತು ಕರ್ನಾಟಕ ಸಾರಿಗೆ ನಿಗಮದ ಬಸ್ ಮುಖಾಮುಖಿ ಢಿಕ್ಕಿಯಾಗಿದೆ. ಕಾರಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದು, ಇವರು ಕಾಸರಗೋಡಿನಿಂದ ಹುಬ್ಬಳ್ಳಿಗೆ ತೆರಳಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಹೊಸಪೇಟೆ | ಕಿಡಿಗೇಡಿಗಳಿಂದ ಖಬರಸ್ತಾನದಲ್ಲಿದ್ದ ನೂರಕ್ಕೂ ಹೆಚ್ಚು ಸಮಾಧಿ ನೆಲಸಮ: ಪ್ರಕರಣ ದಾಖಲು

Similar News