×
Ad

ಭಾರತ್ ಜೋಡೋ ಯಾತ್ರೆ ಸೇರಿದಂತೆ 113 ಸಂದರ್ಭಗಳಲ್ಲಿ ರಾಹುಲ್ ಗಾಂಧಿಯಿಂದ ಭದ್ರತಾ ಮಾರ್ಗಸೂಚಿ ಉಲ್ಲಂಘನೆ:ಸಿಆರ್ ಪಿಎಫ್

Update: 2022-12-29 13:01 IST

ಹೊಸದಿಲ್ಲಿ: ರಾಹುಲ್ ಗಾಂಧಿ ಅವರ ಭದ್ರತೆಯಲ್ಲಿ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ  ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Rahul Gandhi ದಿಲ್ಲಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಸೇರಿದಂತೆ 2020 ರಿಂದ 113 ಸಂದರ್ಭಗಳಲ್ಲಿ ಭದ್ರತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್ CRPF) ಹೇಳಿದೆ.

ದಿಲ್ಲಿಯಲ್ಲಿ ನಡೆದ ಭಾರತ್ ಜೋಡೊ ಯಾತ್ರೆಯ ವೇಳೆ ನಡೆದ ಭದ್ರತಾ ವೈಫಲ್ಯದ ವಿಷಯವನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವುದಾಗಿಯೂ ಭದ್ರತಾ ಪಡೆ ಹೇಳಿದೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ತನ್ನ ನಾಯಕ ರಾಹುಲ್ ಗಾಂಧಿಯ ಭದ್ರತೆಗೆ ರಾಜಿ ಮಾಡಿಕೊಳ್ಳಲಾಗಿದೆ ಹಾಗೂ  ಹೆಚ್ಚುತ್ತಿರುವ ಗುಂಪನ್ನು ನಿಯಂತ್ರಿಸಲು ಹಾಗೂ Z+ ವರ್ಗದ ರಕ್ಷಕನ ಸುತ್ತ ಪರಿಧಿಯನ್ನು ನಿರ್ವಹಿಸುವ ವಿಚಾರದಲ್ಲಿ ಸಿಆರ್ ಪಿಎಫ್  "ಸಂಪೂರ್ಣ" ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಗೃಹ ಸಚಿವ ಅಮಿತ್ ಶಾಗೆ ಪತ್ರವನ್ನು ಬರೆದ ನಂತರ ಬುಧವಾರ ತಡರಾತ್ರಿ CRPF ನ ಉತ್ತರವನ್ನು ಕಳುಹಿಸಲಾಗಿದೆ.

"ಹಲವು ಸಂದರ್ಭಗಳಲ್ಲಿ ರಾಹುಲ್ ಗಾಂಧಿಯವರ ಕಡೆಯಿಂದ ಮಾರ್ಗಸೂಚಿಗಳ ಉಲ್ಲಂಘನೆಯನ್ನು ಗಮನಿಸಲಾಗಿದೆ ಮತ್ತು ಈ ಸಂಗತಿಯನ್ನು ಕಾಲಕಾಲಕ್ಕೆ ಅವರಿಗೆ ತಿಳಿಸಲಾಗಿದೆ" ಎಂದು  ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನೀಡಿದ ಉತ್ತರದಲ್ಲಿ ಸಿಆರ್‌ಪಿಎಫ್ ತಿಳಿಸಿದೆ.

Similar News