×
Ad

‌ಏಕದಿನ ತಂಡಕ್ಕೆ ಆಯ್ಕೆಯಾಗಲು ಅವರಿನ್ನೇನು ಮಾಡಬೇಕು?: ಸಂಜು ಸ್ಯಾಮ್ಸನ್‌ ಗೆ ಬೆಂಬಲ ವ್ಯಕ್ತಪಡಿಸಿದ ಶಶಿ ತರೂರ್

Update: 2022-12-29 19:46 IST

ತಿರುವನಂತಪುರಂ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಗುರುವಾರ ಮತ್ತೊಮ್ಮೆ ಕೇರಳದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಪರ ಬ್ಯಾಟ್ ಬೀಸಿದ್ದಾರೆ ಮತ್ತು ಭಾರತ ತಂಡಕ್ಕೆ ಅವರನ್ನು ಆಯ್ಕೆ ಮಾಡಬೇಕೆಂಬ ಮಾತುಗಳಿಗೆ ಬೆಂಬಲ ನೀಡಿದ್ದಾರೆ.

ತರೂರ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ ನಲ್ಲಿ, ಮುಂಬರುವ ಶ್ರೀಲಂಕಾ ODI ಸರಣಿಗೆ ಭಾರತೀಯ ರಾಷ್ಟ್ರೀಯ ತಂಡದಿಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಆಗಿರುವ ಸಂಜು ಸ್ಯಾಮ್ಸನ್‌ ರನ್ನು ಕೈಬಿಡುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಕೇರಳದಲ್ಲಿ ವ್ಯಾಪಕವಾಗಿ ಶೇರ್‌ ಆಗುತ್ತಿರುವ ಮೀಮ್ ಅನ್ನು ಅವರು ಹಂಚಿಕೊಂಡಿದ್ದಾರೆ. ಭಾರತೀಯ ಬ್ಯಾಟರ್‌ಗಳಲ್ಲಿ ODIಗಳಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿದ್ದರೂ ಸಹ, ಸ್ಯಾಮ್ಸನ್ ತನ್ನ ತವರು ಸ್ಥಳವಾದ ತಿರುವನಂತಪುರದಲ್ಲಿನ ಪಂದ್ಯದಲ್ಲಿ ಆಡಲು ಸಾಧ್ಯವಾಗುತ್ತಿಲ್ಲ.

ಕೇರಳದ ತಿರುವನಂತಪುರದಲ್ಲಿ ಭಾರತ ಏಕದಿನ ಪಂದ್ಯವೊಂದರಲ್ಲಿ ಆಡಲು ಸಜ್ಜಾಗಿದೆ.

“ @IamSanjuSamson ಬಗೆಗಿನ ಈ ಮೀಮ್ ಕೇರಳದಲ್ಲಿ ಸುತ್ತುತ್ತಿದೆ. ನಾನು ಅದನ್ನು ಒಪ್ಪುತ್ತೇನೆ. ಭಾರತದ ಏಕದಿನ ತಂಡದಲ್ಲಿ ಅರ್ಹ ಸ್ಥಾನ ಪಡೆಯಲು ಅವರು ಇನ್ನೇನು ಮಾಡಬೇಕು?" ಎಂದು ತರೂರ್ ಅವರು ತಮ್ಮ ಟ್ವೀಟ್‌ನಲ್ಲಿ ಬಿಸಿಸಿಐನ ಅಧಿಕೃತ ಹ್ಯಾಂಡಲ್ ಅನ್ನು ಟ್ಯಾಗ್ ಮಾಡುವುದರ ಜೊತೆಗೆ ಬರೆದಿದ್ದಾರೆ.

ತರೂರ್ ಅವರು ಸಂಜು ಸ್ಯಾಮ್ಸನ್ ಅವರ ಅಭಿಮಾನಿಗಳಿಗೆ ಹಲವಾರು ಸಂದರ್ಭಗಳಲ್ಲಿ ಬೆಂಬಲವನ್ನು ನೀಡಿದ್ದಾರೆ, ಅವರು ಕೇರಳದ ಕ್ರಿಕೆಟಿಗರು ತಮ್ಮ ದಕ್ಷಿಣ ಭಾರತೀಯ ಮೂಲದ ಕಾರಣದಿಂದ ಬಿಸಿಸಿಐನಿಂದ ನಿರ್ಲಕ್ಷಿಸಲ್ಪಡುತ್ತಾರೆ ಎಂದು ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು.

Similar News