×
Ad

ಉತ್ತರ ಪ್ರದೇಶ:‌ ನ್ಯಾಯಾಲಯದಲ್ಲಿ ಕರ್ತವ್ಯ ನಿರತ ಪೊಲೀಸ್ ಆತ್ಮಹತ್ಯೆ

Update: 2022-12-30 20:38 IST

ಕನೌಜ್,ಡಿ.30: ಉತ್ತರ ಪ್ರದೇಶದ ಕನೌಜ್(Kanauj) ಜಿಲ್ಲೆಯ ಛಿಬರಾಮವು ನ್ಯಾಯಲಯದಲ್ಲಿ ಕರ್ತವ್ಯನಿರತ ಪೊಲೀಸ್ ಕಾನ್ಸ್ಟೇಬಲ್ ಓರ್ವರು ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನಸ್ಟೇಬಲ್ ವಿಷ್ಣುರನ್ನು ಛಿಬರಾಮವು ನ್ಯಾಯಾಲಯದಲ್ಲಿ ಕರ್ತ್ಯವ್ಯಕ್ಕೆ ನಿಯೋಜಿಸಲಾಗಿತ್ತು. ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ಕೆಲಸಮಯ ತನ್ನ ಫೋನ್ನಲ್ಲಿ ಮಾತನಾಡಿದ್ದರು.

ಪೂರ್ವಾಹ್ನ 10 ಗಂಟೆಯ ಬಳಿಕ ವಿಷ್ಣು ನ್ಯಾಯಾಲಯ ಕಟ್ಟಡದ ಹಿಂದಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ದೀಪಕ ದುಬೆ ತಿಳಿಸಿದರು. ಅವರ ಆತ್ಮಹತ್ಯೆಗೆ ಕಾರಣವಿನ್ನಷ್ಟೇ ತಿಳಿದುಬರಬೇಕಿದೆ ಎಂದರು. ಮಥುರಾ ಜಿಲ್ಲೆಯ ನಿವಾಸಿಯಾಗಿದ್ದ ವಿಷ್ಣು ಐದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.

Similar News