​ಅಮೆರಿಕ, ಫ್ರಾನ್ಸ್, ಜರ್ಮನಿಗೆ ಹೊಸ ವರ್ಷದ ಶುಭಾಶಯಗಳಿಲ್ಲ: ರಶ್ಯ ಹೇಳಿಕೆ

Update: 2022-12-30 17:49 GMT

ಮಾಸ್ಕೊ, ಡಿ.30: ಅಮೆರಿಕದ ಅಧ್ಯಕ್ಷ ಜೋ ಬೈಡನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಮತ್ತು ಜರ್ಮನಿಯ ಛಾನ್ಸಲರ್ ಒಲಾಫ್ ಶ್ಹಾಲ್ಜ್ಗೆ ಈ ವರ್ಷ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೊಸ ವರ್ಷದ ಶುಭಾಶಯಗಳನ್ನು ಸಲ್ಲಿಸುವುದಿಲ್ಲ ಎಂದು ರಶ್ಯ ಅಧ್ಯಕ್ಷರ ಕಚೇರಿ ಹೇಳಿದೆ.

ಈ ವಾರಾಂತ್ಯದ ಹೊಸ ವರ್ಷದ ಸಂಭ್ರಮಾಚರಣೆಗೆ ಜಗತ್ತೇ ಸಿದ್ಧಗೊಳ್ಳುತ್ತಿರುವಂತೆಯೇ ಪುಟಿನ್ ಟರ್ಕಿ, ಸಿರಿಯಾ, ವೆನೆಝುವೆಲಾ ಮತ್ತು ಚೀನಾ ಸಹಿತ ರಶ್ಯದ ಮಿತ್ರ ದೇಶಗಳಿಗೆ ಅಭಿನಂದನಾ ಸಂದೇಶ ರವಾನಿಸಿದ್ದಾರೆ. ಆದರೆ ಉಕ್ರೇನ್ ವಿರುದ್ಧದ ಯುದ್ಧದ ಬಳಿಕ ರಶ್ಯದ ಮೇಲೆ ಅಸಾಮಾನ್ಯ ನಿರ್ಬಂಧ ಹೇರಿದ ಅಮೆರಿಕ, ಫ್ರಾನ್ಸ್ ಮತ್ತು ಜರ್ಮನಿಯ ಮುಖಂಡರಿಗೆ ಹೊಸ ವರ್ಷದ ಶುಭಾಶಯ ಹೇಳಿಲ್ಲ. ಪ್ರಸ್ತುತ ಅವರೊಂದಿಗೆ ನಾವು ಯಾವುದೇ ಸಂಪರ್ಕದಲ್ಲಿಲ್ಲ. ಅವರು ನಿರಂತರವಾಗಿ ತೆಗೆದುಕೊಳ್ಳುತ್ತಿರುವ ಸ್ನೇಹಿಯಲ್ಲದ ಕ್ರಮಗಳ ಕಾರಣಕ್ಕೆ ಅಧ್ಯಕ್ಷರು ಅವರಿಗೆ ಅಭಿನಂದನೆ ಸಲ್ಲಿಸುವುದಿಲ್ಲ ಎಂದು ಅಧ್ಯಕ್ಷರ ಕಚೇರಿಯ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

Similar News