ಬ್ರಿಟನ್ ನ ಫ್ಯಾಶನ್ ಡಿಸೈನರ್ ವಿವಿಯೆನ್ ವೆಸ್ಟ್ ವುಡ್ ನಿಧನ‌

Update: 2022-12-30 18:05 GMT

ಲಂಡನ್, ಡಿ.30: ಬ್ರಿಟನ್ನ ಖ್ಯಾತ ಫ್ಯಾಶನ್ ಡಿಸೈನರ್ ವಿವಿಯೆನ್ ವೆಸ್ಟ್ವುಡ್ ದಕ್ಷಿಣ ಲಂಡನ್ ನ ತಮ್ಮ ಮನೆಯಲ್ಲಿ ಗುರು ವಾರ ನಿಧನರಾದರು. ಅವರಿಗೆ 81 ವರ್ಷವಾಗಿತ್ತು.

ಸಂಗೀತ ಮತ್ತು ಫ್ಯಾಶನ್ ಎರಡನ್ನೂ ಒಟ್ಟಿಗೇ ಸಂಯೋಜಿಸಿದ್ದ ವೆಸ್ಟ್ವುಡ್, ಪ್ರಚೋದನೆಯನ್ನೂ ಕಲಾಪ್ರಕಾರವಾಗಿ ಪರಿವರ್ತಿಸಿದವರು. ಫ್ಯಾಶನ್ನಲ್ಲಿ ನಿಜವಾದ ಕ್ರಾಂತಿಕಾರಿ ಮತ್ತು ಬಂಡಾಯದ ಶಕ್ತಿಯಾಗಿದ್ದರು ಎಂದು ಲಂಡನ್ ನ ವಿಕ್ಟೊರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ಬಣ್ಣಿಸಿದೆ.

ವಿವಿಯೆನ್ ಉನ್ನತ ವ್ಯಕ್ತಿಯಾಗಿದ್ದರು ಎಂದು ಬ್ರಿಟನ್ನ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಿಷೆಲ್ ಡೊನೆಲನ್ ಹೇಳಿದ್ದಾರೆ.

Similar News