ಫಿಲಿಪ್ಪೀನ್ಸ್: ಪ್ರವಾಹ ದಿಂದ ಮೃತರ ಸಂಖ್ಯೆ 44ಕ್ಕೆ ಏರಿಕೆ
Update: 2022-12-30 23:52 IST
ಮನಿಲಾ, ಡಿ.30: ಕ್ರಿಸ್ಮಸ್ದಿನದಂದುಫಿಲಿಪ್ಪೀನ್ಸ್ನಲ್ಲಿಸುರಿದಭಾರೀಮಳೆಯಿಂದಾಗಿ ಉಂಟಾದ ನೆರೆ ಹಾಗೂ ಭೂಕುಸಿತ ದಿಂದ ಮೃತಪಟ್ಟವರ ಸಂಖ್ಯೆ 44ಕ್ಕೇರಿದ್ದು ಇನ್ನೂ 28 ಮಂದಿಯ ಸುಳಿವು ಪತ್ತೆಯಾಗಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಶುಕ್ರವಾರ ಹೇಳಿದೆ.
ವಿಸಾಯಾ ಸ್ಮತ್ತು ಮಿಂಡಾನೊ ಪ್ರಾಂತದಲ್ಲಿ ಸುರಿದ ಭಾರೀ ಮಳೆಯಿಂದ ಹಲವು ಗ್ರಾಮಗಳು, ನಗರಗಳು ಹಾಗೂ ಹೆದ್ದಾರಿ ಜಲಾವೃತಗೊಂಡಿದ್ದು ಹಲವೆಡೆ ಭೂಕುಸಿತ ಉಂಟಾಗಿದೆ. ನೆರೆಯಿಂದಾಗಿ ಮೂಲಸೌಕರ್ಯ ವ್ಯವಸ್ಥೆ ಹಾಗೂ ಬೆಳೆಗಳಿಗೆ ವ್ಯಾಪಕಹಾನಿಯಾಗಿದ್ದು 24.4 ದಶಲಕ್ಷಡಾಲರ್ನಷ್ಟ ಅಂದಾಜಿಸಲಾಗಿದೆ. 50,000ಕ್ಕೂ ಅಧಿಕ ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಪ್ರವಾಹ ಇಳಿಮುಖವಾಗಿದ್ದರೂ ಎಡೆಬಿಡದೆ ಮಳೆಸುರಿಯುತ್ತಿದೆ ಎಂದು ವರದಿಯಾಗಿದೆ.