ಆಂಗ್ ಸಾನ್ ಸೂಕಿಗೆ ಮತ್ತೆ 7 ವರ್ಷ ಜೈಲು

Update: 2022-12-30 18:28 GMT

ಯಾಂಗಾನ್, ಡಿ.30: ಮ್ಯಾನ್ಮಾರ್ನಪದಚ್ಯುತನಾಯಕಿ ಆಂಗ್ಸಾನ್ಸೂಕಿಗೆಭ್ರಷ್ಟಾಚಾರಪ್ರಕರಣದಲ್ಲಿ ಅಲ್ಲಿನ ಸೇನಾಡಳಿತ 7 ವರ್ಷದ ಜೈಲುಶಿಕ್ಷೆ ವಿಧಿಸಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿಮಾಡಿದೆ.

ಹೆಲಿಕಾಪ್ಟರ್ಬಾಡಿಗೆಗೆಪಡೆದ, ಖರೀದಿಸಿದ ಮತ್ತು ಅದನ್ನು ನಿರ್ವಹಿಸುವ ಮೂಲಕ ಖಜಾನೆಗೆನಷ್ಟ ಮಾಡಿದ  ಪ್ರಕರಣದಲ್ಲಿ ಸೂಕಿ 5 ಕೌಂಟ್ಗಳ ಭ್ರಷ್ಟಾಚಾರ ಅಪರಾಧ ಎಸಗಿರುವುದು ಸ್ಪಷ್ಟವಾಗಿದೆ ಎಂದು ಮೂಲಗಳು ಹೇಳಿವೆ. 2021 ರಕ್ಷಿಪ್ರದಂಗೆಯ ಬಳಿಕ ಬಂಧನದಲ್ಲಿರುವ 77 ವರ್ಷದ ಸೂಕಿಯ ವಿರುದ್ಧದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲೂ ಅಪರಾಧಸಾಬೀತಾಗಿದ್ದು ಒಟ್ಟು 33 ವರ್ಷದಜೈಲುಶಿಕ್ಷೆಗೆಗುರಿಯಾಗಿದ್ದಾರೆ. ಇನ್ನು ಅವರ ವಿರುದ್ಧ ಯಾವುದೇ ಪ್ರಕರಣದ ವಿಚಾರಣೆ ಬಾಕಿಯುಳಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವಾರವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯಲ್ಲಿ, ಸೂಕಿಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ಸಭೆಯಲ್ಲಿ ಭದ್ರತಾಮಂಡಳಿಯ ಎಲ್ಲಾ ಕಾಯಂ ಸದಸ್ಯರೂಅಪರೂಪದ ಒಗ್ಗಟ್ಟು ಪ್ರದರ್ಶಿಸಿದ್ದರು. ಮ್ಯಾನ್ಮಾರ್ಸೇನಾಡಳಿತದ ನಿಕಟ ಮಿತ್ರದೇಶಗಳಾದ ರಶ್ಯ ಮತ್ತು ಚೀನಾ ನಿರ್ಣಯದ ವಿರುದ್ಧ ವಿಟೊಚಲಾಯಿಸದಿರುವುದು ಗಮನಾರ್ಹವಾಗಿದೆ.

Similar News