ಅಮೆರಿಕದಲ್ಲಿ ಅಪಘಾತ: ಭಾರತೀಯ ಮೂಲದ ಎರಡು ವರ್ಷದ ಮಗು ಮೃತ್ಯು

Update: 2022-12-31 04:13 GMT

ನ್ಯೂಯಾರ್ಕ್: ಅಮೆರಿಕದ ನೆವಡಾ ರಾಜ್ಯದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಭಾರತೀಯ ಮೂಲದ ಎರಡು ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಕ್ಯಾಲಿಫೋರ್ನಿಯಾದ ಐರ್ವಿನ್‌ನಲ್ಲಿ ವಾಸವಿದ್ದ ಆರವ್ ಮುತ್ಯಾಲಾ ಮೃತಪಟ್ಟ ಬಾಲಕ. ಮಿನಿವ್ಯಾನ್ ರೋಲರ್ ಡಿಕ್ಕಿಯಲ್ಲಿ ತಲೆಗೆ ಆದ ಗಂಭೀರ ಗಾಯಗಳಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಲಾಸ್ ವೆಗಾಸ್ ರಿವ್ಯೆ ಜರ್ನಲ್ ಪತ್ರಿಕೆ ವರದಿ ಮಾಡಿದೆ.

ಕ್ರಿಸ್‌ಮಸ್ ದಿನ ನಡೆದ ಈ ದುರಂತದಲ್ಲಿ ಮೃತಪಟ್ಟ ಬಾಲಕನನ್ನು ಕ್ಲರ್ಕ್-ಕೌಂಟಿ ಕೊರೊನರ್ಸ್‌ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸೆವೆನ್ ಮ್ಯಾಜಿಕ್ ಮೌಂಟೇನ್ಸ್ ಬಳಿ ಮರುಭೂಮಿಯಲ್ಲಿ ನಡೆದ ದುರಂತದಲ್ಲಿ ಮಗು ಮೃತಪಟ್ಟಿದೆ.

ಲಾಸ್ ವೇಗಾಸ್ ಬೌಲ್‌ವರ್ಡ್ ಸೌತ್ ಎಂಬಲ್ಲಿ ಭಾನುವಾರ ಸಂಜೆ ಈ ದುರಂತ ಸಂಭವಿಸಿದೆ. ಈ ದುರಂತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Similar News