×
Ad

ರಿಷಭ್ ಪಂತ್ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ: ವರದಿ

Update: 2022-12-31 11:04 IST

ಹೊಸದಿಲ್ಲಿ: ಉತ್ತರಾಖಂಡ್‌ನ ರೂರ್ಕಿ ಬಳಿ ಶುಕ್ರವಾರ ಭೀಕರ ಕಾರು ಅಪಘಾತದ ನಂತರ ಭಾರತದ ವಿಕೆಟ್‌ಕೀಪರ್ ರಿಷಭ್ ಪಂತ್ ಅವರ ಮೆದುಳು ಹಾಗೂ ಬೆನ್ನುಮೂಳೆಯ ಎಂಆರ್‌ಐ ಫಲಿತಾಂಶಗಳು ಸಾಮಾನ್ಯವಾಗಿದೆ. ಪಂತ್ ಅವರು ಮುಖಕ್ಕೆ ಆಗಿರುವ ಗಾಯಗಳು, ಸೀಳಿರುವ ಗಾಯಗಳು ಹಾಗೂ ಸವೆತಗಳಿಗೆ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಲಿದ್ದಾರೆ.  ನೋವು ಹಾಗೂ  ಊತದಿಂದಾಗಿ ಅವರ ಪಾದದ ಹಾಗೂ  ಮೊಣಕಾಲುಗಳ ಎಂಆರ್ ಐ ಸ್ಕ್ಯಾನಿಂಗ್  ಅನ್ನು ಶನಿವಾರ ನಡೆಸಲಾಗುವುದು ಎಂದು India Today ವರದಿ ಮಾಡಿದೆ.

ಭಾರತದ ಸ್ಟಾರ್ ವಿಕೆಟ್‌ಕೀಪರ್ ಅವರು ಚಲಾಯಿಸುತ್ತಿದ್ದ ಕಾರು ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ನಂತರ ಮಾರಣಾಂತಿಕ ಅಪಘಾತದಲ್ಲಿ ಬದುಕುಳಿದಿದ್ದಾರೆ.  ಡಿಕ್ಕಿಯ ರಭಸಕ್ಕೆ ಪಂತ್ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಕೆಲವೇ ನಿಮಿಷಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಗಂಭೀರ ಗಾಯವಾದ  ಹೊರತಾಗಿಯೂ ಪಂತ್ ತನ್ನ ಕಾರಿನ ಗಾಜಿನ ಕಿಟಕಿಯನ್ನು ಒಡೆದುಹಾಕಿ ಮಾರಣಾಂತಿಕ ಅಪಘಾತದಿಂದ ತಪ್ಪಿಸಿಕೊಂಡರು.

ಪಂತ್ ರೂರ್ಕಿಗೆ ತೆರಳುತ್ತಿದ್ದಾಗ ಒಬ್ಬರೇ ವಾಹನ ಚಲಾಯಿಸುತ್ತಿದ್ದರು.

Similar News