ಜ.1ರಿಂದ ಕರ್ನಾಟಕ ಮುಸ್ಲಿಮ್ ಜಮಾಅತ್, ಎಸ್.ವೈ.ಎಸ್., ಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನ

Update: 2022-12-31 07:30 GMT

ಮಂಗಳೂರು, ಡಿ.31: ಕರ್ನಾಟಕ ಮುಸ್ಲಿಂ ಜಮಾಅತ್ ಅಧೀನದಲ್ಲಿ ಸುನ್ನಿ ಯುವಜನ ಸಂಘ(SYS), ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್(SSF) ನೂತನ ಸಂಘಟನಾ ವ್ಯವಸ್ಥೆಯಂತೆ ಈ ಬಾರಿ ಏಕಕಾಲದಲ್ಲಿ ಸಂಯುಕ್ತವಾಗಿ ಸದಸ್ಯತ್ವ ಅಭಿಯಾನ‌ ಹಮ್ಮಿಕೊಂಡಿದೆ. 2023ರ ಜನವರಿ 1ರಂದು ಸದಸ್ಯತ್ವ ದಿನವಾಗಿದ್ದು, ಅಂದು ಪ್ರತೀ ಮೊಹಲ್ಲಾಗಳಲ್ಲಿ ಮೂರು ಸಂಘಟನೆಗಳು ಜಂಟಿಯಾಗಿ ಸದಸ್ಯತ್ವ ಅಭಿಯಾನ‌ಕ್ಕೆ ಚಾಲನೆ ನೀಡಲಿವೆ. ಜನವರಿ 1ರಿಂದ 10ರವರೆಗೆ ಅಭಿಯಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

12 ವರ್ಷದಿಂದ 32 ವರ್ಷ ವಯಸ್ಸಿನವರೆಗೆ ಎಸ್ಸೆಸ್ಸೆಫ್ ಸದಸ್ಯತ್ವದ ಅವಧಿಯಾಗಿದೆ. 32 ವರ್ಷದಿಂದ 47ರವರೆಗೆ ಎಸ್.ವೈ.ಎಸ್. ಹಾಗೂ  ಕರ್ನಾಟಕ ಮುಸ್ಲಿಮ್ ಜಮಾಅತ್ ಸದಸ್ಯತ್ವ ಪಡೆಯಲು 47 ವರ್ಷ ಮೇಲ್ಪಟ್ಟವರಾಗಿರಬೇಕು. ಸದಸ್ಯತನ ನಡೆಸಿದ ಪ್ರತೀ ಮೊಹಲ್ಲಾಗಳಲ್ಲಿ ಯುನಿಟ್ ಸಮಿತಿಯನ್ನು ಅಸ್ತಿತ್ವಕ್ಕೆ ತರುವುದು. ಇದರ ಕಾಲಾವಧಿಯು 2023 ಜನವರಿ 11 ರಿಂದ 22 ಆಗಿರುವುದು. ಸದಸ್ಯತ್ವ ಪಡೆದ ಎಲ್ಲರೂ ಯುನಿಟ್ ಸಮಿತಿಯ ಸಾಮಾನ್ಯ ಸದಸ್ಯರಾಗಿರುವರು. ಯುನಿಟ್ ಸಮಿತಿಗಳ ಮೇಲ್ಘಟಕವಾಗಿ ನೂತನ ವ್ಯವಸ್ಥೆ ಯಂತೆ ಸರ್ಕಲ್ ಸಮಿತಿ ಅಸ್ತಿತ್ವಕ್ಕೆ ಬರಲಿದೆ. ಆದುದರಿಂದ ಎಲ್ಲಾ ಘಟಕಗಳ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಸದಸ್ಯತನ ನಡೆಸಲು ವಿನಂತಿಸಲಾಗಿದೆ ಎಂದು ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ‌ಮೌಲಾನ ಅಬೂ ಸುಫ್ಯಾನ್ ಮದನಿ, ಎಸ್.ವೈ.ಎಸ್. ಪ್ರಧಾನ ಕಾರ್ಯದರ್ಶಿ ಎಂ.ವೈ.ಹಾಫಿಳ್ ಸಅದಿ ಕೊಡಗು, ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮಂಜನಾಡಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ‌ತಿಳಿಸಿದ್ದಾರೆ.

Similar News