ಇರಾನ್‍ನಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ

Update: 2022-12-31 17:02 GMT

ಟೆಹ್ರಾನ್, ಡಿ.31: ಇರಾನ್‍ನಲ್ಲಿ ನಡೆದ ಪ್ರತಿಭಟನೆ ಸಂದರ್ಭ ಭದ್ರತಾ ಪಡೆಗಳಿಂದ ಹತರಾದ ನಾಗರಿಕರಿಗೆ ಶೃದ್ಧಾಂಜಲಿ ಸಲ್ಲಿಸಿದ ಬಳಿಕ ಶುಕ್ರವಾರ ಆಗ್ನೇಯ ಪ್ರಾಂತದಲ್ಲಿ ಮತ್ತೆ ಪ್ರತಿಭಟನೆ ಭುಗಿಲೆದ್ದಿರುವುದಾಗಿ ವರದಿಯಾಗಿದೆ.

ಇರಾನ್‍ನ ಭದ್ರತಾ ಪಡೆಗಳಿಂದ ಹತರಾದ ಪ್ರತಿಭಟನಾಕಾರರ ಸಮಾಧಿಯ ಎದುರು ಸೇರಿದ ಪ್ರತಿಭಟನಾಕಾರರು ಇರಾನ್‍ನ  ಪರಮೋಚ್ಛ ಮುಖಂಡ ಅಯತುಲ್ಲಾ ಆಲಿ ಖಾಮಿನೈಯನ್ನು ಖಂಡಿಸಿ, ಅವರ ವಿರುದ್ಧ ಘೋಷಣೆ ಕೂಗಿದರು. ಈ ಮಧ್ಯೆ, ಇರಾನ್ ಆಡಳಿತ ಬಂಧಿಸಿರುವ ಕನಿಷ್ಟ 100 ಪ್ರತಿಭಟನಾಕಾರರು ಮರಣದಂಡನೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ ಎಂದು ಮಾನವ ಹಕ್ಕುಗಳ ಸಂಘಟನೆ ಹೇಳಿದೆ.

Similar News