×
Ad

ಮಂಗಳೂರು | ರಜೆಯಲ್ಲಿ ಊರಿಗೆ ಆಗಮಿಸಿದ್ದ ಯೋಧ ಹೃದಯಾಘಾತದಿಂದ ನಿಧನ

Update: 2023-01-01 12:12 IST

ಮಂಗಳೂರು. ಜ.1: ರಜೆಯಲ್ಲಿ ಊರಿಗೆ ಆಗಮಿಸಿದ್ದ ಬಿಎಸ್‌ಎಫ್ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ರವಿವಾರ ನಗರದಲ್ಲಿ ನಡೆದಿದೆ.

ಕುಲಶೇಖರ ಸಮೀಪದ ಉಮಿಕಾನ ನಿವಾಸಿ ಹರೀಶ್ ಕುಮಾರ್(43) ಮೃತಪಟ್ಟ ಬಿಎಸ್‌ಎಫ್ ಯೋಧ. ಮೃತರು ಪತ್ನಿ, 6 ವರ್ಷದ ಪುತ್ರ, ಒಂದೂವರೆ ವರ್ಷದ ಪುತ್ರಿ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಕಳೆದ 21 ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು. 142ನೇ ಬಟಾಲಿಯನ್ ಒಡಿಶಾದಲ್ಲಿ ಕರ್ತವ್ಯದಲ್ಲಿದ್ದು, ರಜೆಯ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿದ್ದರು. ಶನಿವಾರ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

Similar News