ಥಾಯ್ಲೆಂಡ್‌ ಗೆ ಹೊರಟಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದ ದಿಲ್ಲಿಗೆ ವಾಪಸ್

Update: 2023-01-03 05:02 GMT

ಹೊಸದಿಲ್ಲಿ: ದಿಲ್ಲಿಯಿಂದ ಥಾಯ್ಲೆಂಡ್‌ನ ಫುಕೆಟ್‌ಗೆ ಹೊರಟಿದ್ದ ಇಂಡಿಗೋ ವಿಮಾನವು ಟೇಕಾಫ್ ಆದ ಕೆಲವೇ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ದಿಲ್ಲಿಗೆ ವಾಪಸಾಗಿದೆ ಎಂದು India Today ವರದಿ ಮಾಡಿದೆ.

ಇಂಡಿಗೋ ಫ್ಲೈಟ್, 6E-1763 ವಿಮಾನವು ದಿಲ್ಲಿಯಿಂದ ಬೆಳಿಗ್ಗೆ 6:25 ಕ್ಕೆ ಹೊರಟಿತು ಹಾಗೂ 7:22 ಕ್ಕೆ ತುರ್ತು ಸ್ಥಿತಿಯನ್ನು ಘೋಷಿಸಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಅಗತ್ಯ ನಿರ್ವಹಣೆಗಾಗಿ ವಿಮಾನ ದಿಲ್ಲಿಗೆ ಮರಳಿದೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.

ಫುಕೆಟ್‌ಗೆ ತೆರಳಲು ಪ್ರಯಾಣಿಕರಿಗೆ ಪರ್ಯಾಯ ವಿಮಾನವನ್ನು ಒದಗಿಸಲಾಗಿದೆ, ”ಎಂದು ಅದು ಹೇಳಿದೆ

Similar News