×
Ad

ಖ್ಯಾತ ರ್‍ಯಾಲಿ ಚಾಲಕ, ಯೂಟ್ಯೂಬರ್ ಕೆನ್ ಬ್ಲಾಕ್ ಅಪಘಾತದಲ್ಲಿ ಮೃತ್ಯು

Update: 2023-01-03 17:25 IST

ಉಟಾ: ಖ್ಯಾತ ಯೂಟ್ಯೂಬರ್, ಪ್ರೊ ರ್‍ಯಾಲಿ ಚಾಲಕರಾಗಿದ್ದ ಕೆನ್ ಬ್ಲಾಕ್ (55) ಅಪಘಾತಕ್ಕೀಡಾಗಿ ನಿಧನರಾಗಿದ್ದಾರೆ ಎಂದು ಅವರು ಪ್ರತಿನಿಧಿಸುತ್ತಿದ್ದ ಹೂನಿಗನ್ ರೇಸಿಂಗ್ ತಂಡ ಹೇಳಿಕೆ ನೀಡಿದೆ. 

ಈ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಹೂನಿಗನ್, ವಾಹನ ಚಲಾಯಿಸುವಾಗ ನಡೆದ ಅಪಘಾತದಲ್ಲಿ ಕೆನ್ ಬ್ಲಾಕ್ ನಿಧರಾಗಿದ್ದಾರೆ ಎಂಬ ಸುದ್ದಿಯನ್ನು ದೃಢಪಡಿಸಲು ತೀವ್ರ ವಿಷಾದವಾಗುತ್ತಿದೆ ಎಂದು ಸಂತಾಪ ವ್ಯಕ್ತಪಡಿಸಿದೆ.

ಉಟಾದ ವಸಾಚ್ ಕೌಂಟಿಯಲ್ಲಿ ಅಪಘಾತ ಸಂಭವಿಸಿದ್ದು, ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಶರೀಫ್ ಕಚೇರಿ, ಬ್ಲಾಕ್ ತೀವ್ರ ಇಳಿಜಾರಿನಲ್ಲಿ ಚಲಾಯಿಸುವಾಗ, ಸ್ನೋ ಮೊಬೈಲ್ (ಹಿಮದಲ್ಲಿ ಚಲಾಯಿಸುವ ವಾಹನ) ಮೇಲಕ್ಕೆ ನೆಗೆದು, ಅವರ ಮೇಲೆ ಬಿದ್ದಿದೆ ಎಂದು ತಿಳಿಸಿದೆ.

ಅಪಘಾತದಲ್ಲಾದ ಗಾಯಗಳಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಅಪಘಾತ ಸಂಭವಿಸಿದಾಗ ಏಕಾಂಗಿಯಾಗಿದ್ದರು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆಯಿಲ್ಲ: ಬಿಜೆಪಿ ತ್ಯಜಿಸಿದ ತಮಿಳು ನಟಿ ಗಾಯತ್ರಿ ಆರೋಪ

Similar News