ಭಟ್ಕಳ ತಾಲೂಕು ಮತದಾರರ ಪಟ್ಟಿ ಪ್ರಕಟ: ವಿವಿಧ ರಾಜಕೀಯ ಮುಖಂಡರ ಸಭೆ
Update: 2023-01-05 20:02 IST
ಭಟ್ಕಳ: ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಮತದಾರರ ಅಚಿತಿಮ ಪಟ್ಟಿಯನ್ನು ಗುರುವಾರ ಪ್ರಕಟಿಸಿದ್ದು, ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ವಿವಿಧ ರಾಜಕೀಯ ಪಕ್ಷದ ಮುಖಂಡರ ಸಭೆ ಗುರುವಾರ ಮಿನಿವಿಧಾನ ಸೌಧದಲ್ಲಿರುವ ಸಹಾಯಕ ಅಯುಕ್ತರ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾ ದೇವಿ, ತಾಲೂಕಿನ ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು, ಎಲ್ಲ ರಾಜಕೀಯ ಪಕ್ಷದ ಮುಖಂಡರಿಗೆ ಮತದಾರರ ಪಟ್ಟಿಯ ಒಂದೊಂದು ಸೆಟ್ ನೀಡಲಾಗಿದೆ. ಈಗಲೂ ಸಹ ಅಂತಿಮ ಪಟ್ಟಿಯಲ್ಲಿ ಹೆಸರು ಮತ್ತಿತರ ವಿವರಗಳನ್ನು ಪರಿಷ್ಕರಿಸಲು ಸಮಯವಕಾಶವಿದೆ ಎಂದು ತಿಳಿಸಿದರು. ಸಾರ್ವಜನಿಕರು ಸಹ ತಮ್ಮ ತಮ್ಮ ಹೆಸರು ಮತ್ತಿತರ ವಿವರಗಳು ಸರಿಯಾಗಿದೆ ಎಂದು ಪರಿಶೀಲಿಸಿ ಬೇಕಾದಲ್ಲಿ ಮಾರ್ಪಾಡು ಮಾಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಭಾರಿ ತಹಸಿಲ್ದಾರ್ ಅಶೋಕ್ ಭಟ್ ಉಪಸ್ಥಿತರಿದ್ದರು.