×
Ad

ಭಟ್ಕಳ: ವ್ಯಕ್ತಿಯೊರ್ವರ ಮೇಲೆ ಚಿರತೆ ದಾಳಿ

Update: 2023-01-05 21:26 IST

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ವ್ಯಕ್ತಿಯೊರ್ವರ ಮೇಲೆ ಚಿರತೆ ದಾಳಿ ನಡೆಸಿದ್ದು, ಗಾಯಗೊಂಡ ವ್ಯಕ್ತಿಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ  ಘಟನೆ ನಡೆದಿದೆ.

ಭಟ್ಕಳ ತಾಲೂಕಿನ ನೂಜ್ ಕೆಕ್ಕೋಡ ನಿವಾಸಿ ದುರ್ಗು ಮರಾಠಿ(37) ಎಂಬಾತನೇ ಚಿರತೆ ದಾಳಿಗೆ ಒಳಗಾದ ವ್ಯಕ್ತಿ. ಇವರು ತಮ್ಮ ಮನೆಯ ಜಗುಲಿಯಲ್ಲಿ ಮಲಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ದುರ್ಗು ಮರಾಠಿ ಕೈ ಕಚ್ಚಿ ಗಾಯಗೊಳಿಸಿದೆ. ವ್ಯಕ್ತಿಯು ಚಿರಿ ಕೊಂಡಿದ್ದು ಜನರು ಬರುತ್ತಿರುವಂತೆ ಚಿರತೆ ಪರಾರಿಯಾಗಿದೆ ಎನ್ನಲಾಗಿದೆ.

ಸದ್ಯ ವ್ಯಕ್ತಿ ಚಿರತೆಯ ದಾಳಿಯಿಂದ ಪಾರಾಗಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಚಿರತೆಯ ದಾಳಿಯಿಂದ ನೂಜ್ ಭಾಗದ ಜನರಲ್ಲಿ ಆತಂಕ ಮನೆ ಮಾಡಿದ್ದು ಇಷ್ಟು ದಿನ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ವನ್ಯ ಜೀವಿಗಳು ಮಾನವನ ಮೇಲೆ ಪ್ರಾಣಾಂತಿಕ ದಾಳಿ ಮಾಡಲು ಆರಂಭಿಸಿದೆ. ಕೂಡಲೆ ಅರಣ್ಯ ಇಲಾಖೆ ನಿಗಾವಹಿಸಬೇಕು. ಗ್ರಾಮಕ್ಕೆ ಬರುವ ಕ್ರೂರ ಮೃಗಗಳನ್ನು ಸೆರೆ ಹಿಡಿದು ದೂರ ಬೀಡಬೇಕು ಎಂದು ಆಗ್ರಹಿಸಿದ್ದಾರೆ.
 
ಸ್ಥಳಕ್ಕೆ ಆರ್‌ಎಫ್‌ಒ ಶರತ ಶೆಟ್ಟಿ ಬೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಗಾಯಗೊಂಡ ವ್ಯಕ್ತಿಗೆ ಸರ್ಕಾರದ ವತಿಯಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

Similar News