×
Ad

ಉತ್ತರ ಪ್ರದೇಶ: 'ಭಾರತ್‌ ಜೋಡೊ ಯಾತ್ರೆ'ಯಲ್ಲಿ ಪಾಲ್ಗೊಂಡ ಮತ್ತೋರ್ವ ರಾಹುಲ್‌ ಗಾಂಧಿ!

Update: 2023-01-05 21:47 IST

ಲಕ್ನೋ: ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಉತ್ತರ ಪ್ರದೇಶ ಪ್ರವೇಶಿಸಿದೆ, ಈ ನಡುವೆ ಬಾಘಪತ್‌ನಲ್ಲಿ ಬುಧವಾರ ಈ ಯಾತ್ರೆಯನ್ನು ವಿಶಿಷ್ಟ ವ್ಯಕ್ತಿಯೊಬ್ಬರು ಸೇರಿಕೊಂಡಿದ್ದಾರೆ. ಅವರೇ ಮೀರತ್‌ನ ಕಾಂಗ್ರೆಸ್‌ ಕಾರ್ಯಕರ್ತ ಫೈಸಲ್‌ ಚೌಧರಿ. ಅವರು ನೋಡಲು ಥೇಟ್‌ ರಾಹುಲ್‌ ಗಾಂಧಿ (Rahul Gandhi) ಅವರಂತೆಯೇ ಇದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ

ರಾಹುಲ್‌ ಗಾಂಧಿ ಅವರಂತೆಯೇ ಬಿಳಿ ಟಿ-ಶರ್ಟ್‌ ಧರಿಸಿದ್ದ ಫೈಸಲ್‌, ಇತರ ಕಾರ್ಯಕರ್ತರೊಂದಿಗೆ ಭಾರತ್‌ ಜೋಡೋ ಯಾತ್ರೆಯಲ್ಲಿ ಹೆಜ್ಜೆಹಾಕಿದ್ದಾರೆ.

"ನಾನು ಮೀರತ್‌ ಕಾಂಗ್ರೆಸ್‌ ಸಮಿತಿಯ ಸದಸ್ಯ, ಮಂಗಳವಾರ ಅಪರಾಹ್ನದಿಂದ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದೇನೆ. ನಾನು ರಾಹುಲ್‌ ಗಾಂಧಿ ರೀತಿ ಕಾಣುತ್ತೇನೆಂದು ಜನರು ಹೇಳುತ್ತಾರೆ. ಖುಷಿಯಾಗುತ್ತದೆ. ಜನರು ನನ್ನೊಂದಿಗೆ ಫೋಟೋಗಳನ್ನೂ ಕ್ಲಿಕ್ಕಿಸುತ್ತಾರೆ," ಎಂದು ಅವರು ಹೇಳಿದರು.

Similar News