ವಿಷಕಾರಿ ಗಾಳಿ ಉಸಿರಾಡುತ್ತಿರುವ ದಿಲ್ಲಿ ಜನತೆ, ತುರ್ತ ಮಟ್ಟಕ್ಕೆ ತಲುಪಿದ ವಾಯು ಮಾಲಿನ್ಯ

Update: 2023-01-07 06:46 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ ಅಥವಾ ಎಕ್ಯೂಐ ಗಂಭೀರ ಶ್ರೇಣಿಗೆ ಸೇರುವ ಮೂಲಕ  ಜನತೆ ವಿಷಕಾರಿ ಗಾಳಿಯನ್ನು ಉಸಿರಾಡುವ ಪರಿಸ್ಥಿತಿಗೆ ಮರಳಿದ್ದಾರೆ. ಸೂಕ್ಷ್ಮವಾದ, ಕ್ಯಾನ್ಸರ್-ಉಂಟುಮಾಡುವ ಮಾಲಿನ್ಯಕಾರಕಗಳ ಸಾಂದ್ರತೆಯು ತುರ್ತು ಮಟ್ಟಕ್ಕೆ ಏರಿದೆ.

ಪಿಎಂ 2.5 ಮಾಲಿನ್ಯಕಾರಕವು ಶ್ವಾಸಕೋಶವನ್ನು ಭೇದಿಸುತ್ತದೆ ಹಾಗೂ ದೀರ್ಘಕಾಲದ ಉಸಿರಾಟದ ಕಾಯಿಲೆಗಳನ್ನು ಉಂಟು ಮಾಡುತ್ತದೆ, ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಸುರಕ್ಷಿತ ಮಿತಿಗಿಂತ ಸುಮಾರು 100 ಪಟ್ಟು ಹೆಚ್ಚು. ಈ ಸೂಕ್ಷ್ಮ ಮಾಲಿನ್ಯಕಾರಕಕ್ಕೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಕೂಡ ಉಂಟಾಗಬಹುದು ಎಂದು ತಿಳಿದುಬಂದಿದೆ.

ಮಾಲಿನ್ಯ ಮಟ್ಟವನ್ನು ನಿಭಾಯಿಸಲು ದಿಲ್ಲಿ-ಎನ್‌ಸಿಆರ್‌ನಲ್ಲಿ ವಿಧಿಸಲಾದ ನಿರ್ಬಂಧಗಳನ್ನು ತೆಗೆದು ಹಾಕಿದ ಕೇವಲ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಮುಂಬರುವ ದಿನಗಳಲ್ಲಿ ವಾಯುಮಾಲಿನ್ಯವು ಇನ್ನಷ್ಟು ಹದಗೆಡುವ ಸಾಧ್ಯತೆಯಿರುವುದರಿಂದ, ರಾಷ್ಟ್ರ ರಾಜಧಾನಿಯಲ್ಲಿ ನಿರ್ಬಂಧಗಳು ಮತ್ತೆ ಜಾರಿಗೊಳಿಸಲಾಗಿದೆ.

ದಿಲ್ಲಿ-ಎನ್‌ಸಿಆರ್‌ನ ಹಲವು ಭಾಗಗಳಲ್ಲಿ ಈಗಾಗಲೇ ಕಡು ಕೆಂಪು ವಲಯದಲ್ಲಿರುವ ಗಾಳಿಯ ಗುಣಮಟ್ಟ ಮುಂದಿನ ಕೆಲವು ದಿನಗಳಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಕೇಂದ್ರದ ವಾಯು ಗುಣಮಟ್ಟ ಸಮಿತಿ ಸಿಎಕ್ಯೂಎಂ ಹೇಳಿದೆ. ದಟ್ಟವಾದ ಮಂಜು, ಗಾಳಿ ಹಾಗೂ  ಕಡಿಮೆ ತಾಪಮಾನದಿಂದಾಗಿ ಗಾಳಿಯ ಹದಗೆಡುವಿಕೆಗೆ ಇದು ಕಾರಣವಾಗಿದೆ.

Similar News