2023ರ ವಿಧಾನಸಭಾ ಚುನಾವಣೆ: ಎಸ್ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Update: 2023-01-07 07:36 GMT

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಎಸ್ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಪೈಝಿ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಎಸ್ಡಿಪಿಐ 10 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ನರಸಿಂಹರಾಜ – ಅಬ್ದುಲ್ ಮಜೀದ್, ಪುಲಕೇಶಿ ನಗರ – ಬಿ.ಆರ್ ಭಾಸ್ಕರ್ ಪ್ರಸಾದ್, ಸರ್ವಜ್ಞ ನಗರ (ಬೆಂಗಳೂರು ) – ಅಬ್ದುಲ್ ಹನ್ನಾನ್, ಬಂಟ್ವಾಳ ( ದಕ್ಷಿಣ ಕನ್ನಡ) – ಇಲ್ಯಾಸ್ ಮಹಮ್ಮದ್ ತುಂಬೆ, ಮೂಡಬಿದಿರೆ ( ದಕ್ಷಿಣ ಕನ್ನಡ) – ಅಲ್ಫೋನ್ಸೋ ಫ್ರಾಂಕೋ, ಬೆಳ್ತಂಗಡಿ ( ದಕ್ಷಿಣ ಕನ್ನಡ) – ಅಕ್ಬರ್ ಬೆಳ್ತಂಗಡಿ, ಕಾಪು ( ಉಡುಪಿ ) – ಹನೀಫ್ ಮುಳೂರು, ದಾವಣಗೆರೆ ದಕ್ಷಿಣ ( ದಾವಣಗೆರೆ) – ಇಸ್ಮಾಯಿಲ್ ಝಬೀವುಲ್ಲಾ, ಚಿತ್ರದುರ್ಗ – ಬಾಳೆಕಾಯಿ ಶ್ರೀನಿವಾಸ್, ವಿಜಯನಗರ – ನಝೀರ್ ಖಾನ್ ಅವರು ಸ್ಪರ್ಧಿಸುವರು ಎಂದು ಎಂ.ಕೆ ಪೈಝಿ ತಿಳಿಸಿದ್ದಾರೆ.

Similar News