ಮದುವೆ, ವಿಚ್ಛೇದನದ ಬಗ್ಗೆ ಏಕರೂಪದ ಕಾನೂನುಗಳನ್ನು ಸಂಸತ್ತು ನಿರ್ಧರಿಸಬೇಕು: ಸುಪ್ರೀಂ ಕೋರ್ಟ್

Update: 2023-01-07 09:19 GMT

ಹೊಸದಿಲ್ಲಿ: ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ ಹಾಗೂ  ಪೋಷಣೆಗೆ ಸಂಬಂಧಿಸಿದಂತೆ ಏಕರೂಪದ ಕಾನೂನು  ಸಂಸತ್ತು ನಿರ್ಧರಿಸುವ ವಿಷಯವೇ ಹೊರತು ನ್ಯಾಯಾಲಯವು ನಿರ್ಧರಿಸುವ ವಿಚಾರವಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು 2020 ರಲ್ಲಿ ಮದುವೆ, ವಿಚ್ಛೇದನ, ದತ್ತು, ನಿರ್ವಹಣೆ ಹಾಗೂ  ಪೋಷಕತ್ವದ ವಿಷಯದ ಮೇಲೆ ಏಕರೂಪದ ಕಾನೂನುಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಹಾಗೂ  ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರ ಹಲವು  ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ.

“ಇದು ಸಂಸತ್ತಿನ ತೀರ್ಮಾನಕ್ಕೆ ಸಂಬಂಧಿಸಿದ ವಿಷಯ. ನಾವು ಕಾನೂನುಗಳನ್ನು  ರೂಪಿಸಲು ಸಾಧ್ಯವಿಲ್ಲ. ಇದು ಸಂಸತ್ತಿನ ಸಾರ್ವಭೌಮತ್ವದೊಳಗೆ ಬರುತ್ತದೆ. ನೀವು ಕಾನೂನನ್ನು ಜಾರಿಗೊಳಿಸಿ ಎಂದು ನಾವು ಸಂಸತ್ತಿಗೆ ಹೇಳಲು ಸಾಧ್ಯವಿಲ್ಲ'' ಎಂದು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ಪೀಠ ಹೇಳಿದೆ

Similar News