ಕುಪ್ಪೆಪದವು ಬದ್ರಿಯಾ ಜುಮಾ ಮಸ್ಜಿದ್: ಅಧ್ಯಕ್ಷರಾಗಿ ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಆಯ್ಕೆ

Update: 2023-01-07 08:47 GMT

ಮಂಗಳೂರು: ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಇದರ ವಾರ್ಷಿಕ ಮಹಾಸಭೆಯು ಸ್ಥಳೀಯ ಖತೀಬರಾದ ಕೆ.ಎಚ್.ಯು. ಶಾಫಿ ಮದನಿ ಕರಾಯ ಉಸ್ತಾದ್ ರವರ ದುವಾದೊಂದಿಗೆ ನಿಕಟ ಪೂರ್ವ ಅಧ್ಯಕ್ಷ ಅಬ್ದುಲ್ ರಹ್ಮಾನ್ ಬದ್ರಿಯಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

2023-2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ಕಜೆ, ಉಪಾಧ್ಯಕ್ಷರಾಗಿ N.A ಅಬ್ದುಲ್ ಲತೀಫ್ ಆಚಾರಿಜೋರಾ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ರಫೀಕ್ ಆಚಾರಿಜೋರ, ಜೊತೆ ಕಾರ್ಯದರ್ಶಿಯಾಗಿ ಮುಸ್ತಫಾ ಕಾಡಕ್ಕೇರಿ, ಕೋಶಾಧಿಕಾರಿಯಾಗಿ ಇಬ್ರಾಹಿಂ ಹಾಜಿ ಆಯ್ಕೆಯಾದರು.

ಸಮಿತಿಯ ಕಾರ್ಯಕಾರಿಣಿ ಸದಸ್ಯರಾಗಿ ಎಲ್. ಉಮರಬ್ಬ , ಅಬ್ದುಲ್ ರಹ್ಮಾನ್ ಬದ್ರಿಯಾ, ಇಸ್ಮಾಯಿಲ್ ಶರೀಫ್, ಅಬ್ದುರ್ರಝಾಕ್  ಹಾಜಿ ಬ್ಲೂಸ್ಟಾರ್, ಶರೀಫ್ ಪದವಿನಂಗಡಿ, ಝಕರಿಯ ಪದರಂಗಿ ಆಯ್ಕೆಯಾದರು.

ಸಭೆಯ ಪ್ರಾರಂಭದಲ್ಲಿ ನಿಕಟ ಪೂರ್ವ ಕಾರ್ಯದರ್ಶಿ ಇಸ್ಮಾಯಿಲ್ ಶರೀಫ್ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಕೆ ರಫೀಕ್ ಆಚಾರಿಜೋರಾ ವಂದಿಸಿದರು.

Similar News