×
Ad

ಜ.30ರಿಂದ ಎಣ್ಮೂರು ಉರೂಸ್: ಫೋಸ್ಟರ್ ಬಿಡುಗಡೆ

Update: 2023-01-07 14:19 IST

ಸುಳ್ಯ, ಜ.7: ಇಲ್ಲಿನ ಐವತ್ತೊಕ್ಲು-ಎಣ್ಮೂರು ರಹ್ಮಾನೀಯಾ ಕೇಂದ್ರ ಜುಮಾ ಮಸ್ಜಿದ್‌ ವಠಾರದಲ್ಲಿ ಅಂತ್ಯವಿಶ್ರಾಂತಿ ಹೊಂದಿರುವ ಮಶೂರತ್ ಬೀವಿ(ರ.ಅ)ಅವರ ಹೆಸರಿನಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಸಲ್ಪಡುವ ಉರೂಸ್ ಸಮಾರಂಭದ ಫೋಸ್ಟರ್ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ಎಣ್ಮೂರು ಜುಮಾ ಮಸ್ಜಿದ್‌ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಇಂದ್ರಾಜೆ, ಕರಿಂಬಿಲ, ನೆಕ್ಕಿಲ, ನಿಂತಿಕಲ್ಲು, ಅಲೆಕ್ಕಾಡಿ ಮತ್ತು ಎಣ್ಮೂರು  ಜಮಾಅತರು ಭಾಗವಹಿಸಿದ್ದರು. ಆರಂಭದಲ್ಲಿ ಅಬ್ದುಲ್ಲ ಮದನಿ ದುಆ ನೆರವೇರಿಸಿದರು. ಉರೂಸ್ ಸಮಿತಿಯ ಅಧ್ಯಕ್ಷ ಮುಸ್ತಫಾ ಸಅದಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೈದರಲಿ ಐವತ್ತೊಕ್ಲು ಸ್ವಾಗತಿಸಿದರು.

ಜ.30ರಿಂದ ಫೆಬ್ರವರಿ 4ರವರೆಗೆ ಉರೂಸ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಉಲಮಾ, ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Similar News