×
Ad

ರಾಹುಲ್‌ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಉದ್ದೇಶ ಭಾರತ್‌ ಜೋಡೋ ಯಾತ್ರೆಗಿಲ್ಲ: ಕಾಂಗ್ರೆಸ್‌ ನಾಯಕ

Update: 2023-01-07 17:57 IST

ಕರ್ನಾಲ್: ರಾಹುಲ್‌ ಗಾಂಧಿ (Rahul Gandhi) ಅವರನ್ನು 2024 ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಉದ್ದೇಶದಿಂದ ಭಾರತ್‌ ಜೋಡೋ ಯಾತ್ರೆ (Bharat Jodo Yatra) ಕೈಗೊಳ್ಳಲಾಗುತ್ತಿಲ್ಲ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಹೇಳಿದ್ದಾರೆ.

"ಇದು ಒಂದು ಸಿದ್ಧಾಂತವಾದಿ ಯಾತ್ರೆಯಾಗಿದ್ದು ರಾಹುಲ್‌ ಅದರ ಕೇಂದ್ರ ಬಿಂದು ಆಗಿದ್ದಾರೆ. ಆದರೆ ಇದು ಒಬ್ಬ ವ್ಯಕ್ತಿಯ ಯಾತ್ರೆಯಲ್ಲ," ಎಂದು ಜೈರಾಂ ರಮೇಶ್‌ ಹೇಳಿದ್ದಾರೆ.

ಪ್ರಸ್ತುತ ಹರ್ಯಾಣಾದ ಕರ್ನಾಲ್‌ ಮೂಲಕ ಸಾಗುತ್ತಿರುವ ಈ ಕನ್ಯಾಕುಮಾರಿಯಿಂದ ಕಾಶ್ಮೀರ ತನಕದ ಯಾತ್ರೆಯು ಚುನಾವಣಾ ಯಾತ್ರೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ದೇಶ ಎದುರಿಸುತ್ತಿರುವ ಮೂರು ಪ್ರಮುಖ ಸಮಸ್ಯೆಗಳಾದ ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ನಿರಂಕುಶವಾದಿತನದ ವಿಚಾರಗಳನ್ನು ಮುಂದಿಟ್ಟುಕೊಂಡು ರಾಹುಲ್‌ ಗಾಂಧಿ ನೇತೃತ್ವದಲ್ಲಿ ಈ ಯಾತ್ರೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೋತಿ ಹೊತ್ತೊಯ್ದ ಚಪ್ಪಲಿ ತೆಗೆಯಲೆಂದು ರೈಲಿನ ಮೇಲೆ ಹತ್ತಿದ ಯುವಕ: ಹೈ-ಟೆನ್ಶನ್‌ ವಿದ್ಯುತ್‌ ತಂತಿ ತಗುಲಿ ಸಾವು

Similar News