ಮಾಯವಾಗುವ ವಾಟ್ಸ್ಆ್ಯಪ್ ಸಂದೇಶಗಳನ್ನು ಉಳಿಸಲು ಶೀಘ್ರದಲ್ಲೇ ಬಳಕೆದಾರರಿಗೆ ಅವಕಾಶ: ಇಲ್ಲಿದೆ ಮಾಹಿತಿ

Update: 2023-01-07 14:39 GMT

ಹೊಸದಿಲ್ಲಿ: ವಾಟ್ಸ್ಆ್ಯಪ್ (Whatsapp) ಹಲವಾರು ಹೊಸ ಫೀಚರ್ಗಳನ್ನು ಅಥವಾ ವೈಶಿಷ್ಟಗಳನ್ನು ತರಲು ಸಜ್ಜಾಗುತ್ತಿದೆ. ಅದು ಇತ್ತೀಚಿಗೆ ಹೊಸ ‘ಕೆಪ್ಟ್ ಮೆಸೇಜಸ್ ಅಥವಾ ಉಳಿಸಲಾದ ಸಂದೇಶಗಳ’ ಫೀಚರ್ ಅನ್ನು ಪರೀಕ್ಷೆಗೊಳಪಡಿಸುತ್ತಿದೆ. ಈ ಫೀಚರ್ ಕಣ್ಮರೆಯಾಗುವ ಸಂದೇಶಗಳನ್ನು ಉಳಿಸಿಕೊಳ್ಳಲು ಬಳಕೆದಾರರಿಗೆ ಅವಕಾಶವನ್ನು ಒದಗಿಸಲಿದೆ. 

ವಾಟ್ಸ್ಆ್ಯಪ್ ನ ‘ಡಿಸಪ್ಪಿಯರಿಂಗ್ ಮೆಸೇಜಸ್’ ಫೀಚರ್ನಲ್ಲಿ ನಿರ್ದಿಷ್ಟ ಅವಧಿಗೆ ಚಾಟ್ ವಿಂಡೋದಲ್ಲಿ ಉಳಿದುಕೊಂಡಿರುವ ಸಂದೇಶಗಳನ್ನು ಮಾತ್ರ ಬಳಕೆದಾರರು ರವಾನಿಸಬಹುದು, ಆದರೆ ಕೆಪ್ಟ್ ಮೆಸೇಜ್ ವೈಶಿಷ್ಟದ ಮೂಲಕ ಕಣ್ಮರೆಯಾಗುವ ಸಂದೇಶಗಳನ್ನು ಉಳಿಸಿಕೊಳ್ಳಬಹುದು.

ವಾಟ್ಸ್ಆ್ಯಪ್ ಈ ಫೀಚರ್ ಅನ್ನು ಪರೀಕ್ಷೆಗೊಳಪಡಿಸಿರುವುದನ್ನು 'ವಾಬೀಟಾಇನ್ಫೋ' (WABetaInfo) ಜಾಲತಾಣವು ವರದಿ ಮಾಡಿದೆ. ಕೆಪ್ಟ್ ಮೆಸೇಜ್ ಗಳು ತಾತ್ಕಾಲಿಕವಾಗಿ ಉಳಿಸಿಕೊಂಡಿರುವ ಕಣ್ಮರೆಯಾಗುವ ಸಂದೇಶಗಳ ಕೇವಲ ಮತ್ತೊಂದು ರೂಪವಾಗಿದೆ. 

ಅಂದರೆ ಅದು ಚಾಟ್ ನಿಂದ ಸ್ವಯಂಚಾಲಿತವಾಗಿ ಅಳಿಸಿಹೋಗುವುದಿಲ್ಲ ಮತ್ತು ಚಾಟ್ ನಲ್ಲಿರುವ ಪ್ರತಿಯೊಬ್ಬರೂ ಅದನ್ನು ಈಗಲೂ ನೋಡಬಹುದು. ಆದರೆ ಬಳಕೆದಾರರು ತಾವು ಉಳಿಸಿಕೊಳ್ಳಲು ಇಚ್ಛಿಸದ ಸಂದೇಶಗಳನ್ನು ‘ಅನ್-ಕೀಪ್ ’ಮಾಡಲು ಈಗಲೂ ಸಮರ್ಥರಾಗಿರುತ್ತಾರೆ. ಒಮ್ಮೆ ಅವರು ‘ಅನ್-ಕೀಪ್’ನ್ನು ಆಯ್ಕೆ ಮಾಡಿಕೊಂಡರೆ ಸಂದೇಶಗಳು ಚಾಟ್ ನಿಂದ ಶಾಶ್ವತವಾಗಿ ಕಣ್ಮರೆಯಾಗುತ್ತವೆ. 

ವಾಬೀಟಾಇನ್ಫೋ (WABetaInfo) ಹಂಚಿಕೊಂಡಿರುವ ಸ್ಕ್ರೀನ್ಶಾಟ್ ನ ಪ್ರಕಾರ, ಕೆಪ್ಟ್ ಮೆಸೇಜ್ ಅನ್ನು ಪ್ರತಿನಿಧಿಸುವ ಬುಕ್ಮಾರ್ಕ್ ಐಕಾನ್ (bookmark icon) ಅನ್ನು ಕಣ್ಮರೆಯಾಗುತ್ತಿರುವ ಸಂದೇಶದ ಬಬಲ್ ನಲ್ಲಿ ಕಾಣಬಹುದು. ಈ ಚಿಹ್ನೆಯು ಕಣ್ಮರೆಯಾಗುತ್ತಿರುವ ಸಂದೇಶವನ್ನು ‘ಉಳಿಸಲಾಗಿದೆ’ ಎನ್ನುವುದನ್ನು ಸೂಚಿಸುತ್ತದೆ. ಐಕಾನ್ ಒಮ್ಮೆ ಕಾಣಿಸಿಕೊಂಡ ಬಳಿಕ ಚಾಟ್ ವಿಂಡೋದಿಂದ ಮಾಯವಾಗುವುದಿಲ್ಲ.

ಇದನ್ನೂ ಓದಿ: ಆ್ಯಂಬುಲೆನ್ಸ್‌ ದೊರೆಯದೆ ಮಹಿಳೆಯ ಮೃತದೇಹವನ್ನು ಹೆಗಲಲ್ಲಿ ಹೊತ್ತು ಸಾಗಿಸಿದ ತಂದೆ, ಮಗ

Similar News