ಸೌದಿ ಅರೇಬಿಯಾ: ಇತ್ತೀಚಿಗೆ ಸುರಿದ ಭಾರೀ ಮಳೆ ಬಳಿಕ ಹಸಿರಿನಿಂದ ಕಂಗೊಳಿಸಿದ ಮಕ್ಕಾ ಪರ್ವತಗಳು

Update: 2023-01-08 17:03 GMT

ರಿಯಾದ್: ವಾರಗಳ ಕಾಲ ಸುರಿದ ಭಾರೀ ಮಳೆಯ ನಂತರ ಸೌದಿ ಅರೇಬಿಯಾದ ಮಕ್ಕಾ ನಗರದ ಪರ್ವತಗಳನ್ನು ಹಸಿರು ಆವರಿಸಿದೆ. ಪರ್ವತಗಳನ್ನು ಹಸಿರು ಚಿಗುರಿರುವ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಒಣ ಮರುಭೂಮಿ ಹವಾಮಾನವನ್ನು ಹೊಂದಿರುವ ಸೌದಿಯಲ್ಲಿ ಹಸಿರು ಆವೃತವಾಗಿರುವುದರಿಂದ ಸಾಕಷ್ಟು ಗಮನ ಸೆಳೆದಿದೆ.

ಸೌದಿ ಪ್ರೆಸ್ ಏಜೆನ್ಸಿ (SPA) ಗುರುವಾರ ಟ್ವಿಟ್ಟರ್‌ನಲ್ಲಿ ಇದಕ್ಕೆ ಸಂಬಂಧಪಟ್ಟ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದು,   "ಮಕ್ಕಾ ಅಲ್-ಮುಕರ್ರಮಾ ಪರ್ವತಗಳು ಹಸಿರು ಬಣ್ಣದಿಂದ ಆವೃತವಾಗಿವೆ" ಎಂದು ಬರೆದಿದೆ.

ರಾಯಲ್ ಕಮಿಷನ್ ಫಾರ್ ದಿ ಮಕ್ಕಾ ಸಿಟಿ ಮತ್ತು ಹೋಲಿ ಸೈಟ್ಸ್ (RCMC) ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲೂ ಮಕ್ಕಾ ಪರ್ವತದ ಚಿತ್ರಗಳನ್ನು   ಹಂಚಿಕೊಂಡಿದ್ದು, “ಅಲ್ಲಾಹು ಮೆಕ್ಕಾವನ್ನು ಅದರ ಪರ್ವತಗಳು, ಬಯಲು ಮತ್ತು ಕಣಿವೆಗಳಿಂದ ಸುಂದರಗೊಳಿಸಿದನು.   ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ಪರಂಪರೆಯನ್ನು ಹೊಂದಿರುವ ಮಕ್ಕಾ ಅಲ್-ಮುಕರ್ರಮಾದ ಸೌಂದರ್ಯವನ್ನು ಜಗತ್ತಿಗೆ ತೋರಿಸುವಂತೆ ಮಾಡಿದೆ” ಎಂದು ಬರೆದಿದೆ.   

ಸೌದಿ ಅರೇಬಿಯಾದಲ್ಲಿ ಇತ್ತೀಚಿನ ವಾರಗಳಲ್ಲಿ ನಿರಂತರ ಮಳೆ ಸುರಿದಿದ್ದು, ಪ್ರವಾಹಕ್ಕೆ ಕೂಡಾ ಕಾರಣವಾಯಿತು.   ಶಿಕ್ಷಣ ಸಚಿವಾಲಯವು ಕಳೆದ ಕೆಲವು ವಾರಗಳಲ್ಲಿ ಹಲವಾರು ಬಾರಿ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಿತ್ತು. ಡಿಸೆಂಬರ್ 2022 ರಲ್ಲಿ, ಮಕ್ಕಾ ಅಲ್-ಮುಕರ್ರಮಾದಲ್ಲಿ ತುರ್ತು ಪರಿಸ್ಥಿತಿ ತಲೆದೋರಿತ್ತು. 

Full View

Similar News