×
Ad

ಮಿತ್ತೂರು: "ಫಿದಾಕ್ -23" ಆರ್ಟ್ ಫೆಸ್ಟ್ ಸಮಾಪ್ತಿ

Update: 2023-01-09 10:51 IST

ವಿಟ್ಲ: ಜ.8  ಮಿತ್ತೂರು ಕೆಜಿಎನ್ ಕ್ಯಾಂಪಸ್ ನಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಕೆಜಿಎನ್ ದ‌ಅವಾ ಕಾಲೇಜಿನ ವಾರ್ಷಿಕ ಆರ್ಟ್ ಫೆಸ್ಟ್ 'ಫಿದಾಕ್ -23' ಸಮಾಪ್ತಿಯಾಯಿತು.‌

ಅನ್ಸೀಫ್ ಮಂಚಿ,  ಇಝ್ಝದ್ದೀನ್ ಕಣ್ಣೂರು, ಮಸ್‌ಊದ್ ಸುಳ್ಯ ಹಾಗೂ ಸಲಾಂ ಸಾಲೆತ್ತೂರು ನಾಯಕತ್ವದಲ್ಲಿ ಕ್ರಮವಾಗಿ  ಫಾಸ್, ಹಲಬ್,  ಇಶ್ಫಾನ್ ಹಾಗೂ ಖೈರುವಾನ್ -ನಾಲ್ಕು ತಂಡಗಳ ನಡುವೆ ಸುಮಾರು 80 ವಿವಿಧ ಸ್ಪರ್ಧೆಗಳಲ್ಲಿ ಸೀನಿಯರ್ ಹಾಗೂ ಜೂನಿಯರ್ ವಿಭಾಗಗಳಲ್ಲಿ ಸುಮಾರು 200 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

ಇಝ್ಝದ್ದೀನ್ ಕಣ್ಣೂರು ನಾಯಕತ್ವದ  ಟೀಂ ಹಲಬ್ ತಂಡವು ಚಾಂಪಿಯನ್ ಆಗಿ‌ ಹೊರಹೊಮ್ಮಿತು.  ಮಸ್‌ಊದ್ ಸುಳ್ಯರವರ ನೇತೃತ್ವದ ಇಶ್ಫ‌ಹಾನ್  ದ್ವಿತೀಯ ಸ್ಥಾನ ಪಡೆದುಕೊಂಡಿತು. ಸೀನಿಯರ್ ವಿಭಾಗದಲ್ಲಿ ಹಾಫಿಳ್ ಅನ್ವರ್ ಸಾದಾತ್ ಪರಪ್ಪು ವೈಯಕ್ತಿಕ ಚಾಂಪಿಯನ್ ಆಗಿ ಮೂಡಿ ಬಂದರೆ, ಜೂನಿಯರ್ ವಿಭಾಗದಲ್ಲಿ ಸುಹೈಲ್ ನೀರಕಟ್ಟೆ ಚಾಂಪಿಯನ್ ಆಗಿ ಹೊರ ಹೊಮ್ಮಿದರು.

ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಭೆಯಲ್ಲಿ ಕೆಜಿಎನ್ ದ‌ಅವಾ ಕಾಲೇಜು ಪ್ರಾಂಶುಪಾಲ ಸೈಯದ್ ಸ್ವಲಾಹುದ್ದೀನ್ ಅಲ್ ‌ಅದನಿ ಅಧ್ಯಕ್ಷತೆ ವಹಿಸಿದ್ದರು. ದಾರುಲ್ ಇರ್ಶಾದ್ ಮ್ಯಾನೇಜಿಂಗ್ ಡೈರಕ್ಟರ್ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಉದ್ಘಾಟನೆ ಮಾಡಿದರು.

ಉಪನ್ಯಾಸಕ ಹುಸೈನ್ ಮು‌ಈನಿ ಅಲ್ ಅಹ್ಸನಿ ಮಾರ್ನಾಡ್, ಕೆಜಿಎನ್ ದ‌‌ಅವಾ ವಿಭಾಗದ ಮುದರ್ರಿಸ್ ಗಳಾದ   ಸಾಬೀತ್ ಮು‌ಈನಿ ಸರಳಿಕಟ್ಟೆ,  ‌‌‌ಲತೀಫ್ ‌ಸ‌ಅದಿ ಕುಕ್ಕಾಜೆ, ಹಾಫಿಳ್ ಮ‌ಸ್‌ಊದ್ ಸ‌ಖಾಫಿ ದೇಲಂಪಾಡಿ, ಶಾಹುಲ್ ಹಮೀದ್ ಮು‌ಈನಿ ಅಲ್ ಅದನಿ, ಹನೀಫ್ ಅಝ್ಹರಿ, ಕ್ಯಾಂಪಸ್ ಮೇನೇಜರ್ ಮುಸ್ತಫ ಮುಈನಿ ಅಸ್ಸಖಾಫಿ ಕಾಶಿಪಟ್ಣ,  ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶ್ರಫ್ ಬಿ.ಸಿ.ರೋಡ್,  ನೌರತುಲ್ ಮದೀನಾ ಸಹಮುಖ್ಯೋಪಾಧ್ಯಾಯ ಅಬ್ದುಸ್ಸಮದ್ ಮು‌ಈನಿ ಅಲ್ ಅದನಿ  ಕೆಜಿಎನ್ ಹಿಫ್ಲುಲ್ ಖುರ್‌ಆನ್ ಕಾಲೇಜಿನ ಹಾಫಿಝ್ ನಝೀರ್ ಅಶ್ರಫಿ ನೀಲೇಶ್ವರ, ಸಿದ್ದೀಖ್ ಕಬಕ, ಹಸೈನಾರ್ ಹಾಜಿ ಕೊಡಿಪ್ಪಾಡಿ, ಅಧ್ಯಾಪಕ ಎ.ಕೆ.ನಂದಾವರ ಮುಂತಾದವರ ಉಪಸ್ಥಿತರಿದ್ದರು.

ಮೂರು ದಿನಗಳ ವಿವಿಧ ಸ್ಪರ್ಧೆಗಳಿಗೆ ಶಾಹುಲ್ ಹಮೀದ್ ಅಹ್ಸನಿ ನಾವೂರು, ಅಡ್ವಕೇಟ್ ನಾಸಿರ್ ಸಖಾಫಿ ದೇಲಂಪಾಡಿ, ಅನ್ಸಾರ್ ಸಖಾಫಿ ಮುಖ್ವೆ, ಅನಸ್ ಅಹ್ಸನಿ ನೀರಕಟ್ಟೆ, ಜೂನಿಯರ್ ‌ದ‌ಅವಾ ಕಾಲೇಜಿನ ಮುದರ್ರಿಸ್ ಸ್ವಾದಿಖ್ ಮು‌ಈನಿ ಅಸ್ಸಖಾಫಿ, ಕಥೆಗಾರ ಮುನವ್ವರ್ ಜೋಗಿಬೆಟ್ಟು, ಅಲ್ತಾಫ್ ಮು‌ಈನಿ ಅಸ್ಸಖಾಫಿ ಹಂಡುಗುಳಿ, ಪತ್ರಕರ್ತ ಝೈನುದ್ದೀನ್ ಮುಈನಿ‌ ಇನೋಳಿ ಮುಂತಾದವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಪ್ರೊಫೆಸರ್ ಡಾ. ಕೆ‌ಎಚ್ ಮುಸ್ತಫಾ,  ಕೆಜಿಎನ್ ಜೂನಿಯರ್ ದ‌ಅವಾ ಕಾಲೇಜು ಮುದರ್ರಿಸ್ ಗಳಾದ ಅಬ್ದುರ್ರಝಾಕ್ ಮುಸ್ಲಿಯಾರ್ ನೀರಕಟ್ಟೆ, ಅಹ್ಮದ್ ಕಬೀರ್ ಸಖಾಫಿ ಮಾಲಾಡಿ,  ಮೇನೇಜರ್ ಹಾರಿಸ್ ಮು‌ಈನಿ ಅಸ್ಸಖಾಫಿ,  ಕೆಜಿಎನ್ ಪಿಯು ಕಾಲೇಜು ಪ್ರಾಂಶುಪಾಲ ಉಮರ್ ಫಾರೂಕ್ ಕೊಡಿಪ್ಪಾಡಿ, ಪಿಯು ವಿಜ್ಞಾನ ವಿಭಾಗದ ಉಪನ್ಯಾಸಕ ಇಫ್ತಿಕಾರ್ , ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆಯ  ಸಹ ಮುಖ್ಯೋಪಾಧ್ಯಾಯ ಅಬ್ದುಲ್ ಲತೀಫ್ ಆತೂರ್, ನೌರತುಲ್ ಮದೀನಾ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯೋಪಾಧ್ಯಾಯ ಅಬ್ದುರ್ರಹ್ಮಾನ್ ‌ಮು‌ಈನಿ ಕಕ್ಕೆಪದವು ಮುಂತಾದವರು ವಿಶೇಷ ವೀಕ್ಷಕರಾಗಿ ಭಾಗವಹಿಸಿದರು. ಫಿದಾಕ್ ಸಂಯೋಜಕ ಸಮಿತಿಯ ನಾಯಕ ಅಮ್ಮಾರ್ ನೀರಕಟ್ಟೆ ಸ್ವಾಗತಿಸಿ ಧನ್ಯವಾದಗೈದರು

Similar News