×
Ad

ವಿಟ್ಲ ಹೊರೈಝನ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ಕೂಟ

Update: 2023-01-09 10:59 IST

ಬಂಟ್ವಾಳ, ಜ.9: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ವಾರ್ಷಿಕ ಕ್ರೀಡಾ ಕೂಟವು ಇತ್ತೀಚೆಗೆ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಮಿತಿ ಅಧ್ಯಕ್ಷ ಝುಬೈರ್ ಮಾಸ್ಟರ್ ವಹಿಸಿದ್ದರು.

ಶಾಲಾ ಸಂಚಾಲಕ ಮಹಮ್ಮದ್ ಇಕ್ಬಾಲ್ ಹಾನೆಸ್ಟ್,  ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್, ಕಾರ್ಯದರ್ಶಿ ನೋಟರಿ ಅಬೂಬಕರ್, ಜತೆ ಕಾರ್ಯದರ್ಶಿ ಸಿದ್ದೀಕ್ ಮಾಲಮೂಲೆ, ಮೇಲ್ವಿಚಾರಕ ಗಫೂರ್, ಲೆಕ್ಕ ಪರಿಶೋಧಕ ಇಕ್ಬಾಲ್ ಮೇಗಿನಪೇಟೆ, ಟ್ರಸ್ಟಿಗಳಾದ ಅಝಿಝ್ ಹಳೆಮನೆ,  ಮುಸ್ತಫಾ ಖಲೀಲ್  ಮೇಗಿನಪೇಟೆ,ಇಕ್ಬಾಲ್ ಹಳೆಮನೆ, ಅಬ್ದುಲ್ ರಹಿಮಾನ್, ಹನೀಫ್ ಎಂ.ಎ, ಅಶ್ರಫ್ ಮೇಗಿನಪೇಟೆ, ಮಸೀದಿಯ ಅಧ್ಯಕ್ಷ ಇಕ್ಬಾಲ್ ಶೀತಲ್, ಕಾರ್ಯದರ್ಶಿ ಹಮೀದ್ ಬದ್ರಿಯ, ಕೋಶಾಧಿಕಾರಿ ಶೆರೀಫ್ ಪೊನ್ನೋಟು, ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ರಫೀಕ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಹವ್ವಾ ಶಫಾ ಸ್ವಾಗತಿಸಿ, ಫಾತಿಮತ್ ಝುಹುರಾ ವಂದಿಸಿದರು.

Similar News