×
Ad

ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿ ಅಧ್ಯಕ್ಷರಾಗಿ ಕೆ.ಬಿ. ಸಲೀಂ ಹಾಜಿ ಆಯ್ಕೆ

Update: 2023-01-09 12:21 IST

ಬಂಟ್ವಾಳ, ಜ.9: ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿ ಅಧ್ಯಕ್ಷರಾಗಿ ಕೆ.ಬಿ. ಸಲೀಂ ಹಾಜಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಸೀದಿಯಲ್ಲಿ ನಡೆದ ಮಸೀದಿ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾಗಿ ಕೆ.ಬಿ.ಕಾಸಿಂ ಹಾಜಿ ಮಿತ್ತೂರು, ಉಪಾಧ್ಯಕ್ಷರಾಗಿ ಆದಂ ಎಂ.ಎಂ.ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಖಂದಕ್ ಮಿತ್ತೂರು, ಜೊತೆ ಕಾರ್ಯದರ್ಶಿಗಳಾಗಿ ಸಿದ್ದೀಕ್ ಪಿ.ಕೆ, ಸಾದಿಕ್ ಅಕ್ಕರೆ, ಕೋಶಾಧಿಕಾರಿಯಾಗಿ ಹಾಜಿ ಅಬ್ದುರ್ರಹ್ಮಾನ್, ಲೆಕ್ಕ ಪರಿಶೋಧಕರಾಗಿ ಅಬ್ದುಲ್ ಅಝೀಝ್ ಅಶ್ಬರಕ್ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇತರ 22 ಮಂದಿಯನ್ನು ನೇಮಿಸಲಾಯಿತು.

Similar News