ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್‌ ನಲ್ಲಿ ಅಪಘಾತ: ಹಿರಿಯ ಕಾರ್ ರೇಸರ್ ಕೆ.ಇ ಕುಮಾರ್ ಮೃತ್ಯು

Update: 2023-01-09 13:22 GMT

ಚೆನ್ನೈ: ಚೆನ್ನೈನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆಯುತ್ತಿರುವ ಭಾರತೀಯ ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನಲ್ಲಿ ಅಪಘಾತಕ್ಕೀಡಾಗಿ ಹಿರಿಯ ಕಾರ್ ರೇಸರ್ ಕೆ.ಇ ಕುಮಾರ್ (59) ರವಿವಾರ ಮೃತಪಟ್ಟಿದ್ದಾರೆ. ಅವರ ಕಾರು ಮತ್ತೊಂದು ವಾಹನಕ್ಕೆ ಢಿಕ್ಕಿ ಹೊಡೆದು ಬಳಿಕ ಬೇಲಿಗೆ ಢಿಕ್ಕಿಯಾಗಿತ್ತು.  ರೇಸ್ ಅನ್ನು ತಕ್ಷಣವೇ ನಿಲ್ಲಿಸಲಾಯಿತು. 

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ ಅವರನ್ನುರೇಸ್ ಸರ್ಕ್ಯೂಟ್‌ನಲ್ಲಿರುವ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಸ್ಥಳದಲ್ಲಿಯೇ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೆ.ಇ ಕುಮಾರ್ ಸಾವನ್ನಪ್ಪಿದ್ದಾರೆ.

ಅಪಘಾತದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿದು ಬಂದಿದೆ.

“ಇದೊಂದು ಅತ್ಯಂತ ದುರದೃಷ್ಟಕರ ಘಟನೆ. ಕುಮಾರ್ ಒಬ್ಬ ಅನುಭವಿ ರೇಸರ್ ಆಗಿದ್ದರು. ನಾನು ಅವರನ್ನು ಹಲವಾರು ದಶಕಗಳಿಂದ ಸ್ನೇಹಿತ ಮತ್ತು ಪ್ರತಿಸ್ಪರ್ಧಿಯಾಗಿ ಅರಿತಿದ್ದೇನೆ. MMSC ಮತ್ತು ಇಡೀ ರೇಸಿಂಗ್ ಕುಟುಂಬವು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತದೆ ಮತ್ತು ಅವರ ಕುಟುಂಬಕ್ಕೆ ಸಂತಾಪವನ್ನು ತಿಳಿಸುತ್ತದೆ" ಎಂದು ಸಭೆಯ ಅಧ್ಯಕ್ಷ ವಿಕ್ಕಿ ಚಾಂಧೋಕ್ ಹೇಳಿದರು.

Similar News