×
Ad

ಕುಂಬಳೆ: ನವೀಕೃತ 'ಕುಂಬೋಳ್ ತಂಙಳ್' ಮಸೀದಿ ಮತ್ತು ದರ್ಗಾ ಕಟ್ಟಡ ಉದ್ಘಾಟನೆ

Update: 2023-01-09 22:54 IST

ಕುಂಬಳೆ: ನವೀಕೃತ 'ಕುಂಬೋಳ್ ತಂಙಳ್' ಮಸೀದಿ ಮತ್ತು ಕುಂಬೋಲಳ್ ಸಯ್ಯಿದ್ ಫಸಲ್ ಪೂಕ್ಕೋಯ ತಂಙಳರ ದರ್ಗಾ ಶರೀಫ್ ಕಟ್ಟಡವು ಉದ್ಘಾಟಿಸಲಾಯಿತು. ಮಸ್ಜಿದುನ್ನಬವಿ ಮಸೀದಿಯ ಬಾಗಿಲಿನ ಮಾದರಿಯಲ್ಲಿ ನಿರ್ಮಿಸಿದ ಮಸೀದಿಯ ಮುಖ್ಯ ಪ್ರವೇಶ ಬಾಗಿಲನ್ನು  ಡಾ. ಸಯ್ಯಿದ್ ಸಿರಾಜುದ್ದೀನ್ ತಂಙಳ್ ಉದ್ಘಾಟಿಸಿದರು.

ಅರಬ್ ಮತ್ತು ಮೊಘಲ್  ಶಿಲ್ಪಕಲೆ ಮಾದರಿಯಲ್ಲಿ ನವೀಕರಿಸಿದ ಕುಂಬೋಳ್ ಬದ್ರಿಯಾ ಜುಮಾ ಮಸೀದಿಯ ಉದ್ಘಾಟನೆ ಮತ್ತು ವಕ್ಫ್ ಕಾರ್ಯವು ಕುಂಬೋಲ್ ಸಯ್ಯಿದ್ ಮುಹಮ್ಮದ್ ಆಟಕ್ಕೋಯ ತಂಙಳ್ ನಿರ್ವಹಿಸಿದರು. ಕುಂಬೋಳ್ ಸಯ್ಯಿದ್ ಅಲಿ ತಂಗಳು ಅಸರ್ ನಮಾಝಿಗೆ  ನೇತೃತ್ವವನ್ನು ನೀಡಿದರು.

ಕೇರಳೀಯ ಶಿಲ್ಪಕಲಾ ಮಾದರಿಯಲ್ಲಿ ನಿರ್ಮಿಸಿದ ದರ್ಗಾ ಶರೀಫ್ ಕುಂಬೋಳ್ ಕಟ್ಟಡವನ್ನು ಸಯ್ಯಿದ್ ಉಮರ್ ಕುಂಞಿಕೋಯ ತಂಙಳ್ ಉದ್ಘಾಟಿಸಿದರು. ಕುಂಬೋಳ್ ಸಯ್ಯಿದ್ ಜಾಫರ್ ಸಾದಿಖ್ ತಂಗಳ್ ಸಮೂಹಿಕ ಝಿಯಾರತ್ ಗೆ ನೇತೃತ್ವ ನೀಡಿದರು.

ಉರೂಸ್: ಜನವರಿ 13 ರಿಂದ 17 ರವರೆಗೆ ಮತ ಪ್ರಭಾಷಣ ಮತ್ತು 19 ರಿಂದ 22 ರವರೆಗೆ ಕುಂಬೋಳ್ ತಂಙಳ್ ಉರೂಸ್ ಕಾರ್ಯಕ್ರಮವು ಪಾಪ್ಪಂ ಕೋಯ ನಗರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಮಾಅತ್ ಸಮಿತಿಯ ಪದಾಧಿಕಾರಿಗಳು ಮತ್ತು ಸ್ಥಳೀಯರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Similar News