ಅಮುಲ್ ಆಡಳಿತ ನಿರ್ದೇಶಕ ಹುದ್ದೆಯಿಂದ ಆರ್. ಎಸ್. ಸೋಧಿಯನ್ನು ಕೆಳಗಿಳಿಸಿದ ಆಡಳಿತ ಮಂಡಳಿ
ಅಹ್ಮದಾಬಾದ್: ಅಚ್ಚರಿಯ ಬೆಳವಣಿಗೆಯಲ್ಲಿ ಅಮುಲ್ (Amul) ಬ್ರ್ಯಾಂಡ್‌ನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಕೊ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಆರ್ ಎಸ್ ಸೋಧಿ (R.S. Sodhi) ಅವರನ್ನು ಹುದ್ದೆಯಿಂದ ಸಂಸ್ಥೆಯ ಆಡಳಿತ ಮಂಡಳಿ ಸೋಮವಾರ ಕೆಳಗಿಳಿಸಿ ಅವರ ಸ್ಥಾನದಲ್ಲಿ ಫೆಡರೇಷನ್‌ನ ಚೀಫ್ ಆಪರೇಟಿಂಗ್ ಆಫೀಸರ್ ಜಯೇನ್‌ಭಾಯಿ ಮೆಹ್ತಾ ಅವರನ್ನು ಹಂಗಾಮಿ ಆಡಳಿತ ನಿರ್ದೇಶಕರನ್ನಾಗಿ ನೇಮಿಸಿದೆ.
ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಸಮಯ ಫೆಡರೇಷನ್ ಭಾಗವಾಗಿರುವ ಸೋಧಿ ಅವರು 2010 ರಿಂದ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. 2015 ರಲ್ಲಿ ಅವರ ಸೇವಾವಧಿ ಮುಗಿದಿದ್ದರೂ ಇನ್ನೂ ಐದು ವರ್ಷಗಳ ಕಾಲ ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸಿ ನಂತರ 2020 ರಲ್ಲಿ ಅವರ ಸೇವಾವಧಿ ಮತ್ತೆ ವಿಸ್ತರಿಸಲಾಗಿತ್ತು.
ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಸೋಧಿ ತಾವೇ ತಮ್ಮನ್ನು ಆಡಳಿತ ನಿರ್ದೇಶಕ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಕೋರಿದ್ದಾಗಿ ತಿಳಿಸಿದ್ದಾರೆ. ತಮ್ಮನ್ನು ಹುದ್ದೆಯಿಂದ ಕೈಬಿಡಲಾಗಿದೆ ಮತ್ತು ತಮ್ಮ ಕಚೇರಿಯನ್ನು ಸೀಲ್ ಮಾಡಲಾಗಿದೆ ಎಂಬ ವರದಿಗಳನ್ನು ಅವರು ನಿರಾಕರಿಸಿದ್ದಾರೆ.
ಸೋಮವಾರ ನಡೆದ ಫೆಡರೇಶನ್ ಆಡಳಿತ ಮಂಡಳಿ ಸಭೆಯಲ್ಲಿ ಸೋಧಿ ಅವರ ಸೇವೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂತ್ಯಗೊಳಿಸಲು ನಿರ್ಧರಿಸಲಾಯಿತು.
ಇದನ್ನೂ ಓದಿ: ಏಕದಿನ ಪಂದ್ಯ: ಶತಕ ಸಿಡಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ